ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಬಂದ ಮಹಿಳೆಯೊಬ್ಬರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಗೆ ಭೇಟಿ ನೀಡಿ ವಂಚಿಸಲು ಮೈಸೂರಿನಲ್ಲಿ ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಒಂದು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಜುಲೈ 3ರಂದು ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಬೆಂಗಳೂರು ಮೂಲದ ಬೆಂಗಳೂರು ಮೂಲದ ಅರುಣ್ ಕುಮಾರ್, ಮಧುಕೇಶವ ಮತ್ತು ನಂದೀಶ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆದಿದೆ.
ಅರುಣ್ ಕುಮಾರಿ ಎಂಬ ಮಹಿಳೆ ನಾನು ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ದರ್ಶನ್ ಅವರನ್ನು ಭೇಟಿ ಮಾಡಿದ್ದು, ನಿಮ್ಮ ಶ್ಯೂರಿಟಿ ಪಡೆದು ಸ್ನೇಹಿತರು 25 ಲಕ್ಷ ರೂ. ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ವಿಚಾರಣೆ ಮಾಡಲು ಬಂದೆ ಎಂದು ಸಾಬೂಬು ಹೇಳಿದ್ದರು.
ನಿರ್ಮಾಪಕ ಉಮಾಪತಿ ಹಾಗೂ ಶ್ರೀನಿವಾಸ ಗೌಡ ಜೊತೆ ಅರುಣಾ ಕುಮಾರಿ ಬಂದಿದ್ದೂ ಅಲ್ಲದೇ ನಿರ್ಮಾಪಕರಾದ ಉಮಾಪತಿ ಮತ್ತು ಶ್ರೀನಿವಾಸ ಗೌಡ ಅವರ ಸಲಹೆ ಮೇರೆಗೆ ಬಂದಿರುವುದಾಗಿ ಹೇಳಿದ್ದರಿಂದ ಪ್ರಕರಣ ತೀವ್ರ ಕುತೂಹಲ ಮೂಡಿಸಿದ್ದು, ಪ್ರಕರಣದ ಹಿಂದೆ ನಿರ್ಮಾಪಕರ ಕೈವಾಡವಿದೆಯಾ ಎಂಬ ಬಗ್ಗೆ ತನಿಖೆ ನಡೆದಿದೆ.
ಮೈಸೂರಿನ ಎನ್ ಆರ್ ಎಸಿಪಿ ಕಚೇರಿಗೆ ದರ್ಶನ್ ಭೇಟಿ ನೀಡಿದ್ದು, ಉಮಾಪತಿ ಹಾಗೂ ಶ್ರೀನಿವಾಸ್ ಗೌಡರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಖುದ್ದು ಡಿಸಿಪಿ ಪ್ರದೀಪ್ ಗುಂಠಿಯಿಂದ ತನಿಖೆ ನಡೆಯುತ್ತಿದ್ದು, ಎಸಿಪಿ ಶಿವಶಂಕರ್ ಸಹಾ ಉಪಸ್ಥಿತಿ ಇದ್ದರು.