ಬಾಂಧವ್ಯ ಬೆಸೆದ ಕಾಗಿನೆಲೆ ನಿರಂಜಾನಂದಪೂರಿ ಶ್ರೀ:
ತುಮಕೂರು: ಕುರುಬ ಸಮುದಾಯದ ಎಸ್.ಟಿ ಮೀಸಲಾತಿ ಹೋರಾಟದ ಪಾದಯಾತ್ರೆ ಸಮಯದಲ್ಲಿ ಕಾಗಿನೆಲೆ ಕನಕಗುರುಪೀಠದ ನಿರಂಜಾನಂದಪೂರಿ ಶ್ರೀಗಳು ಮುಸ್ಲಿಂ ಬಾಂಧವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿ ಬಾಂಧ್ಯವ್ಯ ಬೆಸೆದರು.
ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಕಾಗಿನೆಲೆಯಿಂದ ಪಾದಯಾತ್ರೆ ಆರಂಭಿಸಿರುವ ಶ್ರೀಗಳು ತುಮಕೂರಿನ ಕೋರಾ ಗ್ರಾಮಕ್ಕೆ ತಲುಪಿದಾಗ ಕೋರಾ ಗ್ರಾ.ಪಂ ಮಾಜಿ ಅಧ್ಯಕ್ಷ ನಸೀರ್‌ಅಹಮದ್ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದರು. ಮಾರ್ಗ ಮಧ್ಯದಲ್ಲಿ ಹಲವಾರು ಕುರುಬ ಸಮಾಜ ಬಂಧುಗಳ ಮನೆಗಳಿದ್ದರು, ಅವರೆಲ್ಲರನ್ನು ಬಿಟ್ಟು, ಮುಸ್ಲಿಂ ಬಾಂಧವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದರು.