ತುಮಕೂರು : ತುಮಕೂರಿನ ವಾರ್ತಾ ಇಲಾಖೆಯ ಉಪ ನಿರ್ದೇಶಕರಾಗಿದ್ದ ಡಿ. ಮಂಜುನಾಥ್ ಅವರು ಕಳೆದ ವಾರ ಕೊರೊನಾ ಸೋಂಕು ತಗುಲಿ ಪಾಸಿಟಿವ್ ಬಂದಿದ್ದು ಅವರು ಬೆಂಗಳೂರಿನ ಕೋಲಂಬಿಯಾ ಏಷ್ಯನ್ ಅಸ್ಪತ್ರಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ತುಮಕೂರಿನಲ್ಲಿ ವಾರ್ತಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿ. ಮಂಜುನಾಥ್ ಬೆಂಗಳೂರಿನಿಂದ ತುಮಕೂರಿಗೆ ವರ್ಗಾವಣೆಯಾಗಿ ಬಂದ ಮಂಜುನಾಥ್ ಕಳೆದ ನಾಲ್ಕು ವರ್ಷಗಳಿಂದ ಅತ್ಯಂತ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.
ಎಲ್ಲರಲ್ಲಿಯೂ ಉತ್ತಮ ಬಾಂಧವ್ಯ ಹೊಂದಿದ್ದ ಮಂಜುನಾಥ್. ಮೃದು ಸ್ವಭಾವದವರಾಗಿದ್ದರು. ಯಾರು ಏನೇ ಮಾತನಾಡಿದರು ಅದರ ಬಗ್ಗೆ ತಲೆಕೆಡಿಸಿಕೊಳ್ಳದ ಮಂಜುನಾಥ್ ತಮ್ಮ ಕರ್ತವ್ಯದ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದರು