ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದಿಂದ ಉಕ್ರೇನ್ ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಯೆವಿಘ್ನೆ ಯೆನಿನ್ ತಿಳಿಸಿದ್ದಾರೆ.
31 ಸಿಬ್ಬಂದಿ ಸೇರಿದಂತೆ 83 ಪ್ರಯಾಣಿಕರಿದ್ದ ವಿಮಾನವನ್ನು ಶಸ್ತ್ರಾಸ್ತ್ರ ಹೊಂದಿದ್ದ ಉಗ್ರರು ಹೈಜಾಕ್ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
ಕಳೆದ ಭಾನುವಾರ ಆಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಉಕ್ರೇನಿಯರನ್ನು ಸುರಕ್ಷಿತವಾಗಿ ಕರೆತರಲು ಹೋಗಿದ್ದ ವಿಮಾನವನ್ನು ಮರಳುವಾಗ ಮಂಗಳವಾರದ ವೇಳೆ ಹೈಜಾಕ್ ಮಾಡಲಾಗಿದೆ. ಇರಾನ್ ಕಡೆ ಹೊರಟ್ಟಿದ್ದ ವಿಮಾನವನ್ನು ಒಂದು ಗುಂಪು ಅಪಹರಿಸಿದೆ.