ದೇಶದೊಳಗೆ ಪ್ರವೇಶಿಸಿದ 50ಕ್ಕೂ ಹೆಚ್ಚು ರಷ್ಯಾದ ನುಸುಳುಕೋರರನ್ನು ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್ ಹೇಳಿಕೊಂಡಿದೆ.
ಉಕ್ರೇನ್ ಆಂತರಿಕ ಉಪ ಸಚಿವ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಷ್ಯಾ ಸೇನೆ ದೇಶದ ವಾಯುನೆಲೆ, ಸೇನಾ ಹೆಡ್ ಕ್ವಾರ್ಟರ್ಸ್ ಮತ್ತು ಸೇನಾ ಉಗ್ರಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದರು.
ಉಕ್ರೇನ್ ರಾಜಧಾನಿ ಕೀವ್ ವಾಯುನೆಲೆ ಮೇಲೆ ರಷ್ಯಾ ವಿಮಾನಗಳು ಕ್ಷಿಪಣಿ ದಾಳಿ ನಡೆಸಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.