ಕೇಂದ್ರ ಬಜೆಟ್: ಬಂಗಾಳಿಗರ ಗಮನ ಸೆಳೆದ ನಿರ್ಮಲಾ ಸೀತಾರಾಮನ್ ಸೀರೆ

ನವದೆಹಲಿ: ಈ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದೆ. ನೂತನ ಯೋಜನೆಗಳನ್ನು ಘೋಷಿಸಿಸಿರುವುದನ್ನು ಹೊರತುಪಡಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಂಗಾಳಿಗಳ ಗಮನ ಸೆಳೆದಿದ್ದಾರೆ. ಈ ವರ್ಷ ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯುವುದರಿಂದ ಈ ಮೂರೂ ರಾಜ್ಯಗಳಿಗೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲ ವಿಶೇಷ ಪ್ಯಾಕೇಜ್ ಗಳು ಘೋಷಣೆಯಾದವು.
ಅಲ್ಲದೇ, ಬಜೆಟ್ ಮಂಡನೆಯ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ತೊಟ್ಟಿದ್ದ ಸೀರೆ ಬಂಗಾಳಿಗರ ಗಮನ ಸೆಳೆದಿದೆ. ವಿತ್ತ ಸಚಿವೆ ಧರಿಸಿದ್ದ ದೊಡ್ಡ ಕೆಂಪು ಅಂಚಿನ ಸೀರೆ ಬಂಗಾಳಿಗರ ಪಾಲಿಗೆ ವಿಶೇಷವಾದದ್ದು. ನವರಾತ್ರಿಯ ಸಮಯದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯುವ ದುರ್ಗಾ ಪೂಜೆಯ ಸಂದರ್ಭದಲ್ಲಿ ಹೆಂಗಳೆಯರು ಇಂಥ ಸೀರೆಗಳನ್ನು ತೊಡುವುದು ವಾಡಿಕೆ. ಕೆಂಪು ಅಂಚಿನ (ಲಾಲ್ ಪಾಡ್) ಸೀರೆ ಬಂಗಾಳಿ ಹೆಂಗಳೆಯರ ಪಾಲಿಗೆ ಬಹುಮುಖ್ಯವಾದದ್ದು. ಇದಲ್ಲದೇ, ಬಜೆಟ್ ಮಂಡನೆಯ ಸಂದರ್ಭದಲ್ಲಿ ರವೀಂದ್ರನಾಥ್ ಠಾಗೋರರ ಕವನವನ್ನು ಉಲ್ಲೇಖಿಸಿದ ನಿರ್ಮಲಾ ಸೀತಾರಾಮನ್ ಸಾಂಕೇತಿಕವಾಗಿ ಬಂಗಾಳಿಗರ ಗಮನ ಸೆಳೆದಿದ್ದಾರೆ.