ಕೇಂದ್ರ ಬಜೆಟ್ ನಲ್ಲಿ ಸಿನಿಮಾ ರಂಗ ಕಂಪ್ಲೀಟ್ ಕಡೆಗಣನೆ

ನವದೆಹಲಿ: ಇಂದು 2021-22ರ ಸಾಲಿನ ಬಜೆಟ್ ಮಂಡನೆ ಮಾಡಲಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಸಿನಿಮಾ ರಂಗವನ್ನು ನೆನಪಿನಲ್ಲೇ ಇಟ್ಟುಕೊಂಡಿಲ್ಲ ಎಂಬುದು ಬೇಸರದ ವಿಚಾರವಾಗಿದೆ.
ಕೊರೋನಾ ಸಂಕಷ್ಟಕ್ಕೆ ಚಿತ್ರೋದ್ಯಮ ಕೂಡ ಸಿಕ್ಕಿಬಿದ್ದಿತ್ತು. ಸಿನಿಮಾ ಕಾರ್ಮಿಕರ ಆರ್ಥಿಕ ಸಂಕಷ್ಟ ಅನುಭವಿಸಿದ್ರು. ಬಜೆಟ್ ನಲ್ಲಿ ಸಿನಿ ಕಾರ್ಮಿಕರಿಗೆ ಏನಾದರೂ ಪರಿಹಾರ ಘೋಷಣೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದ್ರೆ ಆ ನಿರೀಕ್ಷೆ ಕಂಪ್ಲೀಟ್ ಹುಸಿಯಾಗಿದೆ.
ಕೊರೊನಾ ಶುರುವಾದಾಗ ಮುಚ್ಚಿದ ಥಿಯೇಟರ್ ಗಳು ಸುಮಾರು ಏಳು ತಿಂಗಳ ಕಾಲ ಮುಚ್ಚಿತ್ತು. ಅದಾದ ಮೇಲೆ ಥಿಯೇಟರ್ ಓಪನ್ ಆದ್ರೂ ಕೂಡ ನಿರೀಕ್ಷಿಸಿದ ಮಟ್ಟಕ್ಕೆ ಪ್ರೇಕ್ಷಕರು ಬರಲಿಲ್ಲ. ಈಗಲೂ ಕೂಡ ಹೇಳಿಕೊಳ್ಳುವಂತ ಆದಾಯ ಪಡೆಯುತ್ತಿಲ್ಲ. ಈ ನಿಟ್ಟಿನಲ್ಲಿ ಏನಾದರೂ ಕಾರ್ಮಿಕರ ಪರ ಘೋಷಣೆಯಾಗಬಹುದು ಎಂದುಕೊಂಡಿದ್ದರು. ಆದರೆ ಕೇಂದ್ರ ಸರ್ಕಾರ ಚಿತ್ರೋದ್ಯಮವನ್ನು ಸಂಪೂರ್ಣ ಕಡೆಗಣಿಸಿದೆ.