ಕಳೆದ ಕೆಲವು ದಿನಗಳಿಂದ ಶಂಕಿತ ಡೆಂಘ್ಯೂಗೆ 40 ಮಕ್ಕಳು ಸೇರಿದಂತೆ ಸುಮಾರು 44 ಮಂದಿ ಮೃತಪಟ್ಟ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ನಡೆದಿದೆ.
ಜಿಲ್ಲೆಯ ವಿವಿಧೆಡೆ ಕಳೆದ 10-12 ದಿನಗಳಿಂದ 40 ಮಕ್ಕಳು ಹಾಗೂ ನಾಲ್ವರು ವಯಸ್ಕರು ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಕೂಡಲೇ ವರ್ಗಾಯಿಸಲಾಗಿದೆ.
ನಿನ್ನೆ ರಾತ್ರಿ ಮೂವರು ಮೃತಪಟ್ಟಿದ್ದರೆ, ಮೊನ್ನೆ ಇಬ್ಬರು ಅಸುನೀಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ ಎಂದು ಫಿರೋಜಾಬಾದ್ ನಲ್ಲಿ ಬಿಜೆಪಿ ಶಾಸಕ ಮನೀಶ್ ಅಸಿಜಾ ಆರೋಪಿಸಿದ್ದಾರೆ.