ಲಕ್ಷದ್ವೀಪದ ಬಳಿ ಅಮೆರಿಕ ಯುದ್ಧನೌಕೆ: ವಿರೋಧ ವ್ಯಕ್ತಪಡಿಸಿದ ಭಾರತ

ಲಕ್ಷದ್ವೀಪ: ಭಾರತದ ಅನುಮತಿಯಿಲ್ಲದೇ ಮೀಸಲು ಆರ್ಥಿಕ ವಲಯದೊಳಗೆ ಸಲ್ಲುವ ಜಲಪ್ರದೇಶದಲ್ಲಿ ಸಂಚಾರ ಮಾಡಿತ್ತು. ಅಲ್ಲದೇ, ಹೀಗೆ ಅನುಮತಿಯಿಲ್ಲದೇ ಸಂಚರಿಸಿದ ಬಗ್ಗೆ ಸಮರ್ಥನೆ ನೀಡಿತ್ತು.

ಇದೀಗ ಅಮೆರಿಕದ ಈ ನಡೆಗೆ ಭಾರತ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ನವದೆಹಲಿಯ ಅಮೇರಿಕನ್ ಕಾನ್ಸುಲೇಟ್ ಮತ್ತು ವಾಷಿಂಗ್ಟನ್ ಡಿಸಿಯ ವಿದೇಶಾಂಗ ಇಲಾಖೆ ಎರಡೂ ಕಡೆ ಪ್ರತಿಭಟನೆ ಸಲ್ಲಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಯುಎಸ್‌ಎಸ್ ಜಾನ್ ಪಾಲ್ ಜೋನ್ಸ್ ಹಡಗು ಪರ್ಷಿಯನ್ ಕೊಲ್ಲಿಯಿಂದ ಮಲಾಕ್ಕಾ ಜಲಸಂಧಿಗೆ ಸಾಗುವುದನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ನಮ್ಮ ಇಇಜೆಡ್ ಮೂಲಕ ನಡೆದ ಈ ಸಂಚಾರದ ಬಗ್ಗೆ ನಮ್ಮ ಕಾಳಜಿಯನ್ನು ಅಮೆರಿಕ ಸರ್ಕಾರಕ್ಕೆ ರಾಜತಾಂತ್ರಿಕ ಮಾರ್ಗಗಳ ಮೂಲಕ ತಿಳಿಸಿದ್ದೇವೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಲಕ್ಷದ್ವೀಪದ ಬಳಿ ವಿಶೇಷ ಆರ್ಥಿಕ ವಲಯದಲ್ಲಿ ಅಭ್ಯಾಸ ನಡೆಸಿದ ತಮ್ಮ ನೌಕಪಾಡೆಗಳ ಕ್ರಮವನ್ನು ಅಮೆರಿಕದ ರಕ್ಷಣಾ ಇಲಾಖೆ ಸಮರ್ಥಿಸಿಕೊಂಡಿತ್ತು.  ಇದು ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿದೆ ಎಂದು ಹೇಳಿತ್ತು.

ಅಮೆರಿಕ ನೌಕಾಪಡೆಗಳು ಭಾರತಕ್ಕೆ ಮೀಸಲಾದ ವಿಶೇಷ ಆರ್ಥಿಕ ವಲಯದಲ್ಲಿ (ಇಇಝೆಡ್) ಭಾರತದ ಪೂರ್ವಾನುಮತಿ ಇಲ್ಲದೆ  ಸಂಚಾರ ಕಾರ್ಯಾಚರಣೆ ನಡೆಸಿದ್ದಾಗಿ ನೌಕಾಪಡೆಯ ‘ಸೆವೆಂತ್‌ ಫ್ಲೀಟ್‌’ ಕಮಾಂಡರ್‌ ಹೇಳಿಕೆ ಬಿಡುಗಡೆ ಮಾಡಿತ್ತು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!