ವಿಶ್ವದ ಅಗ್ರಮಾನ್ಯ ಆಟಗಾರ ಸರ್ಬಿಯಾದ ನೊವಾಕ್ ಜೋಕೊವಿಕ್ ಮೊದಲ ಸೆಟ್ ನಲ್ಲಿ ಸೋಲುಂಡರೂ ನಂತರ ಸತತ ಮೂರು ಸೆಟ್ ಗೆದ್ದು ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ದಾಖಲೆಯ 21ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜೋಕೊವಿಕ್ ಗುರುವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ 5-7,6-2,6-2, 6-3 ಸೆಟ್ ಗಳಿಂದ 25 ವರ್ಷದ ಇಟಲಿಯಾದ ಮಟಿಯೊ ಬೆರ್ರೆಟಿನಿ ಅವರನ್ನು ಸೋಲಿಸಿದರು.
ಮಟಿಯೊ ಬೆರ್ರೆಟಿನಿ ಮತ್ತು ಜೊಕೊವಿಕ್ ಮೂರು ಬಾರಿ ಪರಸ್ಪರ ಎದುರಾಗಿದ್ದಾರೆ. ವಿಂಬಲ್ಡನ್ ಫೈನಲ್ ಮತ್ತು ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ನಲ್ಲಿ ಎದುರಾಗಿದ್ದು, ಮೂರು ಪಂದ್ಯಗಳಲ್ಲಿ ಜೊಕೋವಿಕ್ 4 ಸೆಟ್ ಗಳಲ್ಲಿ ಗೆಲುವು ಕಂಡಿದ್ದಾರೆ.