ಮದುವೆ ಬಳಿಕ ಪತ್ನಿ ಅತ್ಯಾಚಾರದ ವಿಡಿಯೋ ವೈರಲ್: ಪತಿ ಮಾಡಿದ್ದೇನು..?
ಉತ್ತರ ಪ್ರದೇಶ. ರಾಜ್ಯದ ರೇವ್ತಿ ಎಂಬ ಪಟ್ಟಣದಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದ ದುಷ್ಕರ್ಮಿ ಆಕೆ ವಿವಾಹವಾದ ಬಳಿಕ ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆಕೆಯ ಪತಿ ಆಕೆಗೆ ಡಿವೋರ್ಸ್ ನೀಡಿದ್ದಾನೆ.
ಮಹಿಳೆ ಮೇಲೆ ಕಳೆದ ವರ್ಷ ಅತ್ಯಾಚಾರವೆಸಗಿದ್ದ ನರೇಂದ್ರ ಎಂಬ ದುಷ್ಕರ್ಮಿ. ತದನಂತರ ಮರ್ಯಾದೆಗೆ ಅಂಜಿ ಮಹಿಳೆ ಯಾರ ಬಳಿಯು ವಿಷಯ ಬಾಯಿಬಿಟ್ಟಿರಲಿಲ್ಲ. ಬಳಿಕ ಈ ಯುವತಿ ಕಳೆದ ವರ್ಷ ಡಿಸೆಂಬರ್ನಲ್ಲಿ ಬೇರೊಬ್ಬನ ಜೊತೆ ವಿವಾಹವಾಗಿದ್ದಳು. ಕೆಲದಿನಗಳ ಹಿಂದೆ ನವವಿವಾಹಿತೆಯ ಅತ್ಯಾಚಾರದ ವಿಡಿಯೋವನ್ನ ಕಿರಾತಕ ನರೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ.
ಈ ಹಿನ್ನಲೆಯಲ್ಲಿ ಸಂತ್ರಸ್ತೆಯ ತಂದೆ ರೇವ್ತಿ ಪೊಲೀಸ್ ಠಾಣೆಯಲ್ಲಿ ದೂರನ್ನ ದಾಖಲಿಸಿದ್ದು , ಈ ದೂರನ್ನ ಆಧರಿಸಿದ ಪೊಲೀಸರು ಆರೋಪಿ ನರೇಂದ್ರನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.