ವಿಜಯಪುರ : ಜಮೀನಿನಲ್ಲಿ ಗುಡ್ಡೆ ಹಾಕಿದ್ದ ಕಡಲೆ ಬೆಳೆಯ ರಾಶಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಶುಕ್ರವಾರ ತಡರಾತ್ರಿ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಾವಿತ್ರಿ ಈಶ್ವರಪ್ಪ ಹುನ್ನೂರ ಎಂಬುವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ನಡೆದಿದೆ. ಆರು ಎಕರೆಯಲ್ಲಿ ಬೆಳೆಯಲಾಗಿದ್ದ ಕಡಲೆ ಬೆಳೆಗೆ ದುಳ್ಳರು ಬೆಂಕಿ ಇಟ್ಟಿದ್ದು, ಇದರಿಂದ ಸುಮಾರು ರೂ. 1.50 ಲಕ್ಷ ಹಾನಿ ಯಾಗಿದೆ ಎನ್ನುಲಾಗುತ್ತಿದೆ.
ಹಾನಿಗೊಳಗಾಗಿರುವ ಮಹಿಳೆ ಬೆಳೆ ಬೆಳೆದಿರುವುದನ್ನು ಸಹಿದ ಜನರು ಈ ಕೃತ್ಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಗ್ರಾಮದಲ್ಲಿ ಇಂತಹ ಹೀನ ಕೆಲಸ ಮಾಡಿರುವ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಬಂಧಿಸಬೇಕು. ಬೆಳೆ ಕಳೆದುಕೊಂಡು ನಷ್ಟವಾಗಿರುವ ಸಾವಿತ್ರಿ ಅವರಿಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದು, ಬಬಲೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.