ವಿಜಯಪುರ : ಇಷ್ಟು ದಿನಗಳ ಹೋರಾಟದ ಫಲವಾಗಿ ಇಂದು ದೇಶದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಅದರ ಬಳಿಕ ಅಯೋಧ್ಯೆಯ ಟ್ರಸ್ಟ್ ನವರು ಕರ್ನಾಟಕದ ಅಂಜನಾದ್ರಿ ಬೆಟ್ಟದಲ್ಲಿ ಹನುಮ ದೇವಸ್ಥಾನ ನಿರ್ಮಿಸಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಒತ್ತಾಯಿಸಿದ್ದಾರೆ.
ನಗರದ ಸಿದ್ದೇಶ್ವರ ದೇವಸ್ಥಾನ ಬಳಿ ನಡೆದ ನಿಧಿ ಸಮರ್ಪಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಯೋಧ್ಯೆಗೆ ಹೋದವರೆಲ್ಲ ಇಂದು ಒಂದಲ್ಲ ಒಂದು ಸ್ಥಾನದಲ್ಲಿದ್ದಾರೆ. ಬಾಬ್ರಿ ಮಸೀದಿ ಹೋರಾಟದಲ್ಲಿ ಭಾಗವಹಿಸಿದವರಲ್ಲಿ ಇಂದು ಸಚಿವ, ಶಾಸಕ, ಗ್ರಾಮ ಪಂಚಾಯತಿ ಸದಸ್ಯರಾಗಿದ್ದಾರೆ . ರಾಮಮಂದಿರ ನಿರ್ಮಿಸುವ ನಿಟ್ಟಿನಲ್ಲಿ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ನಿರಂತರವಾಗಿ ಶ್ರಮಿಸಿದ್ದಾರೆ. ದಲಿತರು, ಲಿಂಗಾಯತರು ಎಂಬ ಭೇದ ಭಾವವಿಲ್ಲದೇ ಹಿಂದೂ ಸಮಾಜ ಸಂಘಟನೆ ಅವರು ಮಾಡಿದ್ದಾರೆ.
ಇಷ್ಟು ವರ್ಷ ಹೋರಾಟ ಮಾಡಿದರೂ ರಾಮಮಂದಿರ ನಿರ್ಮಾಣ ಬಗ್ಗೆ ಎಲ್ಲರಿಗೂ ಸಂಶಯವಿತ್ತು. ನಾವು ರಾಜಕಾರಣಿಗಳು ಪ್ರತಿ ಚುನಾವಣೆ ಬಂದಾಗ ರಾಮಮಂದಿರ ನಿರ್ಮಾಣ ವಿಷಯ ಬರುತ್ತಿತ್ತು. ಇದು ಸಹಜವಾಗಿ ಜನರಿಗೆ ಇದೊಂದು ಚುನಾಚಣೆ ಅಜೆಂಡಾ ಎನ್ನುತ್ತಿದ್ದರು. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ರಾಮಮಂದಿರ ನಿರ್ಮಾಣ ಕಾಲ ಕೂಡಿ ಬಂದಿದೆ ಎಂದರು. ಇನ್ನೂ ಮುಂದೆ ಕಾಶಿ, ಮಥುರಾಗಳಲ್ಲಿ ವಿಶ್ವನಾಥ, ಶ್ರೀ ಕೃಷ್ಣ ಮಂದಿರ ಹಾಗೂ ಕರ್ನಾಟಕದ ಅಂಜನಾದ್ರಿ ಬೆಟ್ಟದ ಹನುಮ ದೇವಸ್ಥಾನ ನಿರ್ಮಿಸುವ ಗುರಿಯನ್ನು ಅಯೋಧ್ಯೆಯ ಟ್ರಸ್ಟ್ ಹೊಂದಬೇಕು ಎಂದು ಆಗ್ರಹಿಸಿದರು.