ಇದು ಮಹಾರಾಷ್ಟ್ರದ ಥಾಣೆಯ ವಿಠ್ಠಲವಾಡಿ ರೈಲು ನಿಲ್ದಾಣದಲ್ಲಿ ನಡೆದ ಘಟನೆ. ಇಲ್ಲಿ 18 ವರ್ಷದ ಹುಡುಗ ರೈಲು ಬರುವಾಗ ಹಳಿಗೆ ಜಿಗಿದಿದ್ದ. ಇದನ್ನು ಅಲ್ಲಿದ್ದ ಪೊಲೀಸ್ ಕಾನ್‌ಸ್ಟೇಬಲ್ ನೋಡುವುದು ಸೆಕೆಂಡುಗಳಷ್ಟು ತಡವಾಗಿದ್ದರೂ ಅಲ್ಲೇನಾಗುತ್ತಿತ್ತು ಎಂದು ಊಹಿಸುವುದಕ್ಕೇ ಸಾಧ್ಯವಿಲ್ಲ. ವೈರಲ್ ಆಗುತ್ತಿರುವ 33 ಸೆಕೆಂಡಿನ ಈ ಕ್ಲಿಪ್‌ನಲ್ಲಿ ಈ ಭಯಾನಕ ದೃಶ್ಯವಿದೆ. ಹಳದಿ ಟೀ ಶರ್ಟ್ ಧರಿಸಿರುವ ಯುವಕ ಕಾಣಿಸುತ್ತಾನೆ.
ಇದನ್ನು ಓದಿ :-JOE BIDEN – ಉತ್ತರಾಧಿಕಾರಿಯನ್ನಾಗಿ ಕಮಲಾ ಹ್ಯಾರಿಸ್ರನ್ನ ಯಾಕೆ ಆಯ್ಕೆ ಮಾಡಬೇಕಿತ್ತು?- ಪತಿ ವಿರುದ್ಧ ಜೋ ಬೈಡನ್ ಪತ್ನಿ ಅಸಮಾಧಾನ
ಅಷ್ಟರಲ್ಲಿ ರೈಲು ಬರುತ್ತಿರುವುದು ಕೂಡಾ ಕಾಣಿಸುತ್ತದೆ. ಈ ವೇಳೆ, ಅದೇನಾಯ್ತೋ ಏನೋ ಈ ಹಳದಿ ಟೀಶರ್ಟ್‌ನ ಯುವಕ ನೇರವಾಗಿ ಹಳಿಗೆಜಿಗಿದು ನಡುವಿನಲ್ಲಿ ನಿಂತಿದ್ದ. ಇದನ್ನು ಅಲ್ಲೇ ಇದ್ದ ಪೊಲೀಸ್ ಕಾನ್ಸ್‌ಸ್ಟೇಬಲ್ ನೋಡಿದ್ದರು. ಇದಾದ ಬಳಿಕ ಅರೆಕ್ಷಣವೂ ವ್ಯರ್ಥ ಮಾಡದ ಪೊಲೀಸ್ ಕಾನ್ಸ್ ಸ್ಟೇಬಲ್ ಜೀವದ ಹಂಗು ತೊರೆದು ಹಳಿಗೆ ಜಿಗಿದು ಈ ಯುವಕನನ್ನು ಹಳಿಯಿಂದ ಆಚೆ ತಳ್ಳಿ ಜೀವ ಉಳಿಸಿದ್ದರು. ಕಣ್ಣು ಮುಚ್ಚಿ, ಕಣ್ಣು ಬಿಡುವಷ್ಟರಲ್ಲಿ ಈ ರಕ್ಷಣಾ ಕಾರ್ಯ ಮುಗಿದಿತ್ತು. ಈ ದೃಶ್ಯ ರೈಲು ನಿಲ್ದಾಣದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಕಂಡಾಗ ಒಂದು ಕ್ಷಣ ಎದೆ ಝಲ್ ಎನ್ನುತ್ತೆ. ಆದ್ರೂ ಪೊಲೀಸ್ ಕಾನ್ಸ್ ಸ್ಟೇಬಲ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನು ಓದಿ :- ಆರ್ಥಿಕ ಅವನತಿಯತ್ತ ಶ್ರೀಲಂಕಾ – ಸಕ್ಕರೆ, ಬೇಳೆಗೆ ಚಿನ್ನದ ಬೆಲೆ – 1 ಕಪ್ ಟೀ ಗೆ 100 ರೂಪಾಯಿ !