ಮಲಗಿದ್ದ ಪತ್ನಿಯ ಕೈಕಾಲು ಕಟ್ಟಿ ಹಾಕಿದ ಪತ್ನಿ ಕುತ್ತಿಗೆ ಮೇಲೆ ಕಾಲಿಟ್ಟು ಚಾಕುವಿನಿಂದ ಇರಿದು ಕೊಂದ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜೆಜೆ ನಗರದ ಓಬಳೇಶ್ ಕಾಲೋನಿಯ 4ನೇ ಕ್ರಾಸ್ ನಿವಾಸಿ ಮಹೇಶ್ (41) ಕೊಲೆಯಾದ ವ್ಯಕ್ತಿ. ಪತ್ನಿ ಪದ್ಮ ಕೊಲೆ ಮಾಡಿದ್ದಾರೆ.
ಸೋಮವಾರ ಮುಂಜಾನೆ 3.30ರ ಸುಮಾರಿಗೆ ಪದ್ಮ, ಮಲಗಿದ್ದ ಪತಿಯನ್ನು ಮಂಚಕ್ಕೆ ಕಟ್ಟಿ ಹಾಕಿ ಚಾಕುವಿನಿಂದ ಇರಿದು ಕೊಂದಿದ್ದಾರೆ.
ಪ್ರತಿದಿನ ಕುಡಿಯುವುದಕ್ಕೆ ಮತ್ತು ಎಳನೀರು ತರಲು ದುಡ್ಡು ಕೊಡಲಿಲ್ಲ ಎಂದು ಪ್ರತಿದಿನ ಗಂಡನ ಜೊತೆ ಜಗಳ ನಡೆಯುತ್ತಿದ್ದು ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ.
ಜೆಜೆ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.