ಯಾರು ಅಸಲಿ ದೇಶಭಕ್ತರು..? ಯಾರು ನಕಲಿ ಎನ್ನುವುದನ್ನು ನಂತರ ನಿರ್ಧರಿಸೋಣ, ಮೊದಲು ಜನರ ಕಷ್ಟಕ್ಕೆ ಸ್ಪಂದಿಸಿ – ಪ್ರಿಯಾಂಕ್ ಖರ್ಗೆ

ಜನರ ಕಣ್ಣೀರು ಒರೆಸುವುದು ಬಿಟ್ಟು ರಾಜ್ಯ ಸರ್ಕಾರವು ಭಾವನಾತ್ಮಕ ವಿಷಯಗಳಿಗೆ ಒತ್ತು ಕೊಡುತ್ತಿದೆ. ಇವರ ಚರ್ಚೆಗೆ ನಾವು ಖಂಡಿತ ಸಿದ್ಧರಿದ್ದೇವೆ ಎಂದು ಕಾಂಗ್ರೆಸ್ ( CONGRESS ) ನಾಯಕ ಪ್ರಿಯಾಂಕ್ ಖರ್ಗೆ ( PRIYANKA KGARGE ) ಹೇಳಿದ್ದಾರೆ.

ಯಾರು ಅಸಲಿ ದೇಶಭಕ್ತರು..? ಯಾರು ನಕಲಿ ಎನ್ನುವುದನ್ನು ನಂತರ ನಿರ್ಧರಿಸೋಣ. ಆದರೆ ಅದಕ್ಕೆ ಮೊದಲು ಜನರ ಕಷ್ಟಕ್ಕೆ ಸ್ಪಂದಿಸಿ. ಆಡಳಿತ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಕೆಪಿಎಸ್ಸಿ ಪರೀಕ್ಷೆ ಬರೆದಿರುವವರು ಹೈರಾಣಾಗಿದ್ದಾರೆ. ಶಾಂತಿ ಸುವ್ಯವಸ್ಥೆಗೆ ಅಪಾಯ ಬಂದಿರುವುದರಿಂದ ವ್ಯಾಪಾರ ವ್ಯಹಾರಗಳು ಕುಸಿಯುತ್ತಿವೆ. ಇದು ಜನರ ದೈನಂದಿನ ಬದುಕಿಗೆ ಧಕ್ಕೆ ತರುತ್ತದೆ. ಅಷ್ಟೇ ಅಲ್ಲ, ರಾಜ್ಯದ ತೆರಿಗೆ ಆದಾಯದ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸರ್ಕಾರ ನಡೆಯುತ್ತಿಲ್ಲ, ಸಿಎಂ ಬದಲಾಗುತ್ತಾರೆ ಎಂದು ಅವರ ಪಕ್ಷದವರೇ ಹೇಳುತ್ತಿದ್ದಾರೆ. ತಮ್ಮ ಸಮಸ್ಯೆ, ಗೊಂದಲಗಳನ್ನು ಪರಿಹರಿಸಿಕೊಳ್ಳಲು ವಿಫಲರಾದ ಬಿಜೆಪಿ ನಾಯಕರು ಜನರ ಗಮನ ಬೇರೆಡೆಗೆ ಸೆಳೆಯಲು ಭಾವನಾತ್ಮಕ ಅಂಶಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಇದು ರಾಜ್ಯದ ಹಿತಕ್ಕೆ ಒಳಿತಲ್ಲ ಎಂದು ಹೇಳಿದರು.
ಕರ್ನಾಟಕ ಸರ್ಕಾರವು ಜನೋತ್ಸವ ಮಾಡಲು ಈ ಹಿಂದೆಯೂ ಎರಡು ಮೂರು ಪ್ರಯತ್ನಿಸಿತ್ತು. ಜನರ ಆಕ್ರೋಶ ತೀವ್ರವಾಗಿದ್ದರಿಂದ ಅದನ್ನು ಮುಂದೂಡಲಾಯಿತು. ತಮ್ಮ ಸಾಧನೆ ಶೂನ್ಯ ಎಂದು ಅಂದುಕೊಂಡಿದ್ದರಿಂದ ಜನೋತ್ಸವ ಬಿಟ್ಟು ಸಾರ್ವಕರ್ ( SARVARKAR ) ಉತ್ಸವ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು. ಸಚಿವರಿಗೆ ನಿಮ್ಮ ಜಿಲ್ಲೆಗಳಿಗೆ ಹೋಗಿ ಎಂದು ಮುಖ್ಯಮಂತ್ರಿ ಕಣ್ಣೀರು ಹಾಕುತ್ತಾ ಹೇಳಿದರೂ ಯಾವೊಬ್ಬ ಸಚಿವರೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಸಚಿವರು ಹೋಗದ ಕಾರಣ ಪಾಪ ಸಿಎಂ ಅವರೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪ್ರವಾಹದ ವರದಿಯನ್ನು ಮಂತ್ರಿಗಳಿಗೆ ನೀಡುವ ಪರಿಸ್ಥಿತಿ ನಿರ್ಮಾಣವಾಯಿತು. ಇದು ಇದು ನಮ್ಮ ಬಿಜೆಪಿ ಸರ್ಕಾರದ ಸಾಧನೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ  : – ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳ ಮೇಯರ್, ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ನಿಗದಿ


ಸಚಿವ ಮುನಿರತ್ನ ( MUNIRATHNA ) ವಿರುದ್ಧ ಕೆಂಪಣ್ಣ ಮಾಡಿರುವ ಭ್ರಷ್ಟಾಚಾರದ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಈಗ ಕೆಂಪಣ್ಣನವರೇ ನೇರವಾಗಿ ಮಾಧ್ಯಮಗಳ ಎದುರು ಹೇಳಿದ್ದಾರೆ. ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು. ಸಿಎಂ ವಿಶೇಷ ತನಿಖಾ ತಂಡವನ್ನ ಯಾಕೆ ರಚಿಸಿಲ್ಲ..? ನ್ಯಾಯಾಂಗ ತನಿಖೆಯನ್ನು ಏಕೆ ಮಾಡಿಸಲಿಲ್ಲ.? ನಾವು ಕ್ಲೀನ್ ಇದ್ದೇವೆ ಎಂದು ಹೇಳುವವರು ಈಗೇಕೆ ಸುಮ್ಮನಿದ್ದಾರೆ ಎಂದು ಸರ್ಕಾರದ ವಿರುದ್ಧ ಪ್ರಿಯಾಂಕ್ ಆಕ್ರೋಶ ವ್ಯಕ್ತಪಡಿಸಿದ್ರು. ಬಿಜೆಪಿ ( BJP ) ಯವರದ್ದು ವಾಟ್ಸಾಪ್ ಯೂನಿರ್ಸಿಟಿ. ಹಾಗಾಗಿ ಅದರಲ್ಲಿ ಏನೂ ಇರುವುದಿಲ್ಲ. 1909 ರಲ್ಲಿ ಸಾರ್ವಕರ್ ವಿದ್ಯಾಭ್ಯಾಸಕ್ಕಾಗಿ ಲಾ ಓದಲು ಲಂಡನ್ ಗೆ ಹೋಗುವ ಮೊದಲು ಅಭಿನವ ಭಾರತ ಸಂಸ್ಥೆ ಸ್ಥಾಪಿಸಿದ್ದರು ಎಂದು ನೆನಪಿಸಿಕೊಂಡರು. ನಾಸಿಕ್ ಕಲೆಕ್ಟರ್ ಜಾಕ್ಸನ್ ಕೊಲೆ ಪ್ರಕರಣದಲ್ಲಿ ಈ ಅಭಿನವ ಸಂಸ್ಥೆಯ ಅಧ್ಯಕ್ಷರಾದ ಸಾರ್ವಕರ್ ಅವರನ್ನು ಬ್ರಿಟನ್ ನಲ್ಲಿಯೇ ಬಂಧಿಸಲಾಗಿತ್ತು. ಭಾರತಕ್ಕೆ ಕರೆತಂದ ನಂತರ ಸಾರ್ವಕರ್ ಪರ ಬ್ಯಾಪಿಸ್ಟ್ ವಾದ ಮಾಡಿದ್ದರು. ಅಂಡಮಾನ್ ನ ಕಾಲಪಾನಿಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಸಾವರ್ಕರ್ ಇತರ ರಾಜಕೀಯ ಖೈದಿಗಳಂತೆ ಎಣ್ಣೆ ತೆಗೆಯಲಿಲ್ಲ. ಬ್ರಿಟಿಷರ ಜೊತೆಗೆ ಚೆನ್ನಾಗಿದ್ದ ಕಾರಣ ಅವರಿಗೆ ಕ್ಲರಿಕಲ್ ಕೆಲಸ ಕೊಡಲಾಗಿತ್ತು ಎಂದು ಹೇಳಿದ್ರು.


ಅಂಡಮಾನ್ ಗೆ ಹೋದ ಎರಡೇ ತಿಂಗಳಲ್ಲಿ ಸಾವರ್ಕರ್ ಕ್ಷಮಾಪಣೆ ಪತ್ರ ಬರೆದರು. ಸಾರ್ವಕರ್ ಸಹೋದರ ಕೂಡ ಪತ್ರ ಬರೆದು, ನಾವು ನಿಮ್ಮ ಸರ್ಕಾರದಲ್ಲಿ ಕೆಲಸ ಮಾಡ್ತೇವೆ. ದಾರಿ ತಪ್ಪಿದ ಮಗ ಇನ್ನೆಲ್ಲಿಗೆ ಹೋಗ್ತಾನೆ. ಮತ್ತೆ ಮನೆಗೆ ಬಂದಿದ್ದೇನೆ ಕ್ಷಮಾಪಣೆ ಕೊಡಿ ಎಂದು ಕೋರಿದ್ದರು. ಮುಸ್ಲಿಮರು ಮತ್ತು ಹಿಂದುಗಳಿಗೆ ಪ್ರತ್ಯೇಕ ದೇಶ ಬೇಕು ಎಂದವರು ಸಾವರ್ಕರ್ ಎಂದು ಹೇಳಿದ್ರು.

ಇದನ್ನೂ ಓದಿ  : – ಸಿದ್ದರಾಮಯ್ಯ ಸುಳ್ಳು ಎರಡು ನಾಣ್ಯದ ಒಂದೇ ಮುಖಗಳು – ಸಿ.ಟಿ ರವಿ ಗಂಭೀರ ಆರೋಪ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!