ಕೇಂದ್ರ ಸರ್ಕಾರವೇ 12ನೇ ತರಗತಿಯ ಸಿಬಿಎಸ್‌ಸಿ ಪರೀಕ್ಷೆ ಬೇಡ ಎಂದಿದೆ. ಆದರೇ ನಮ್ಮ ರಾಜ್ಯ ಸರ್ಕಾರ ಹಠಕ್ಕೆ ಬಿದ್ದಿದೆ. ಯಾವ ಪುರುಷಾರ್ಥಕ್ಕೆ ಪರೀಕ್ಷೆ ಮಾಡುತ್ತಿದ್ದಿರಾ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಹಠಕ್ಕೆ ಈ ಪರೀಕ್ಷೆ ನಡೆಸುತ್ತಿದ್ದೀರಾ? ಯಾವ ತಜ್ಞರು ಈ ಐಡಿಯಾ ಕೊಟ್ಟರು ಗೊತ್ತಿಲ್ಲ. 40 ಮಾರ್ಕ್ಸ್‌ಗೆ ಪರೀಕ್ಷೆ ಬರೆದರೆ ಸಾಕಂತೆ ಎಂದರು.
ಈ ಪುರುಷಾರ್ಥಕ್ಕೆ ಯಾಕ್ರಿ ಪರೀಕ್ಷೆ ನಡೆಸುತ್ತಿದ್ದಿರಾ? ಪ್ರಧಾನಿ ಮೋದಿಯೇ ಹೇಳಿದ್ದಾರೆ ಜೀವನಕ್ಕಿಂತ ಜೀವ ಮುಖ್ಯ ಅಂತ. ನೀವ್ಯಾಕೆ ಮಕ್ಕಳ ಜೀವ ತೆಗೆಯಲು ಮುಂದಾಗಿದ್ದೀರಾ? ಎಂದು ರಾಜ್ಯ ಸರಕಾರ ಹಾಗೂ ಶಿಕ್ಷಣ ಸಚಿವರನ್ನು ವಿಶ್ವನಾಥ್ ತರಾಟೆಗೆ ತೆಗೆದುಕೊಂಡರು.