ಪ್ರೀತಿಸಿ ಮದುವೆಯಾದವಳೇ ಪಕ್ಕದ ಮನೆಯವನ ಜೊತೆಗೆ ಮನೆ ತೊರೆದು ಹೋಗಿದ್ದರಿಂದ ನೊಂದ ಗಂಡ ಫೇಸ್ ಬುಕ್ ನಲ್ಲಿ ವೀಡಿಯೀ ಹರಿಬಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ಜಿ. ತಾಳಿಕೋಟಿ ತಾ. ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ವೆಂಕಟೇಶ ದ್ವಾರನಹಳ್ಳಿ (25) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ವೆಂಕಟೇಶ್ ಪತ್ನಿ ಪಕ್ಕದ ಮನೆಯ ಸಹೋದರ ಸಂಬಂಧಿ ಶ್ರೀಶೈಲ್ ಎಂಬುವನ ಜೊತೆಗೆ ಹೋಗಿದ್ದಳು. ಈ ಬಗ್ಗೆ ವೆಂಕಟೇಶ್ ತಾಳಿಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ವೆಂಕಟೇಶ್ ಪತ್ನಿಯನ್ನು ಕರೆಸಿ ವಿಚಾರಣೆ ನಡೆಸಿದಾಗ ವೆಂಕಟೇಶ ಜೊತೆಗೆ ಇರೊಲ್ಲ, ಪ್ರೀಯಕರ ಶ್ರೀಶೈಲ್ ಜೊತೆಗೆ ಇರುವುದಾಗಿ ಹೇಳಿಕೆ ನೀಡಿದ್ದಳು. ಆಕೆಯ ಹಕ್ಕುಗಳ ಬಗ್ಗೆ ಗಂಡ ವೆಂಕಟೇಶಗೆ ಪೊಲೀಸರು ಮನವರಿಕೆ ಮಾಡಿಕೊಟ್ಟಿದ್ದು.
ಇದರಿಂದ ನೊಂದ ನೊಂದ ವೆಂಕಟೇಶ್, ನೇಣು ಬಿಗಿದಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೂ ಮುನ್ನ ಫೇಸ್ ಬುಕ್ ನಲ್ಲಿ ಹರಿಬಿಟ್ಟ ವೀಡಿಯೊದಲ್ಲಿ ತನ್ನ ಸಾವಿಗೆ ಶ್ರೀಶೈಲ್ ಹೊಣೆ ಎಂದು ಆರೋಪ ಮಾಡಿದ್ದಾರೆ.
ಫೇಸ್ ಬುಕ್ ನಲ್ಲಿ ವಿಡಿಯೋ ಕಂಡು ಜಮೀನಿನಲ್ಲಿ ನೇಣು ಬಿಗಿದುಕೊಂಡು ಒದ್ದಾಡುತ್ತಿದ್ದ ವೆಂಕಟೇಶ ಪ್ರಾಣ ಉಳಿಸಲು ಸ್ಥಳೀಯರ ಯತ್ನಿಸಿದ್ದು, ತಾಳಿಕೋಟೆ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ದಾರಿ ಮಧ್ಯೆಯೇ ವೆಂಕಟೇಶ ಮೃತಪಟ್ಟಿದ್ದಾನೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.