ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಪತ್ನಿ, ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿದ್ದೂ ಅಲ್ಲದೇ ಶವವನ್ನು ಚರಂಡಿಗೆ ಎಸೆದು ವಿಕೃತಿ ಮೆರೆದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ನಗರದ ಬಡ್ಡಿಹಳ್ಳಿಯ ನಿವಾಸಿ ನಾರಾಯಣ 52 ಮೃತ ದುರ್ದೈವಿ. ಅನ್ನಪೂರ್ಣ (45) ಪತಿಯನ್ನೇ ಕೊಲೆಗೈದ ಪಾಪಿ ಪತ್ನಿ.
ಮದುವೆ ನಂತರ ಕಳೆದ 8 ವರ್ಷಗಳಿಂದ ಪತಿ ಮತ್ತು ಪತ್ನಿ ನಡುವೆ ಪ್ರತಿನಿತ್ಯ ಜಗಳ ಆಗುತ್ತಿದ್ದು, ಇತ್ತೀಚೆಗೆ ಜಗಳ ನಡೆದಾದ ಸಿಟ್ಟಿಗೆದ್ದ ಪತ್ನಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಳೆ. ಅಷ್ಟಕ್ಕೆ ಆಕೆಯ ಕೋಪ ಕಡಿಮೆ ಆಗದೇ ಚರಂಡಿಯಲ್ಲಿ ಶವವನ್ನು ಎಸೆದಿದ್ದಾಳೆ.
ಪತಿ ನಾರಾಯಣ ನೆಲಮಂಗಲ ಟೋಲ್ ಬಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅನ್ನಪೂರ್ಣಗೆ ಅಕ್ರಮ ಸಂಬಂಧ ಇದ್ದು, ಈ ಬಗ್ಗೆ ಜಗಳ ನಡೆದಿತ್ತು ಎನ್ನಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.