ಮಗ ವಿರುದ್ಧ ಪದೇಪದೆ ದೂರು ನೀಡಿ ನೆರೆಹೊರೆಯವರು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ತಾಯಿಯೊಬ್ಬಳು ಮಗುವಿನ ಜೊತೆ 12ನೇ ಮಹಡಿಯ ಮೇಲಿಂದ ಹಾರಿ ಮೃತಪಟ್ಟ ಭೀಕರ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
44 ವರ್ಷಷ ರೇಷ್ಮಾ ಟ್ರೆಂಚಿಲ್ ತನ್ನ 7 ವರ್ಷದ ಮಗನ ಜೊತೆ ಮಹಡಿ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೇಷ್ಮಾ ಟ್ರೆಂಚಿಲ್ ಇತ್ತೀಚೆಗಷ್ಟೇ ಕೋವಿಡ್ ನಿಂದ ಪತಿಯನ್ನು ಕಳೆದುಕೊಂಡಿದ್ದರು. ಇದೇ ದುಃಖದಲ್ಲಿದ್ದ ಮಹಿಳೆಗೆ ನೆರೆಮನೆಯವರು ಮಗು ಜೋರಾಗಿ ಸದ್ದು ಮಾಡುತ್ತಿದೆ. ಇದರಿಂದ ತೊಂದರೆ ಆಗುತ್ತಿದೆ ಎಂದು ಪದೇಪದೆ ದೂರು ನೀಡಿ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ.
ರೇಷ್ಮಾ ಟ್ರೆಂಚಿಲ್ ಆತ್ಮಹತ್ಯೆಗೂ ಮುನ್ನ ಬರೆದ ಡೆತ್ ನೋಟ್ ನಲ್ಲಿ ಪದೇಪದೆ ಕಿರುಕುಳ ನೀಡುತ್ತಿದ್ದ ನೆರೆಮನೆಯವರೇ ನನ್ನ ಸಾವಿಗೆ ಕಾರಣ ಎಂದು ಬರೆದಿಟ್ಟಿದ್ದಾರೆ. ಈ ದೂರನ್ನು ಆಧರಿಸಿ ಪೊಲೀಸರು 33 ವರ್ಷದ ವ್ಯಕ್ತಿ ಹಾಗೂ ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.