ರಸ್ತೆ ಬದಿಯಲ್ಲಿ ನಿಂಬೆಹಣ್ಣಿನ ಜ್ಯೂಸ್, ಐಸ್ ಕ್ರೀಂ ಮಾರುತ್ತಿದ್ದ ಯುವತಿ ಈಗ ಅದೇ ಬಡಾವಣೆಯ ಪೊಲೀಸ್ ಇನ್ ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ನಾಡಿನ ಜನಮನ ಗೆದ್ದಿದ್ದಾರೆ.
12 ವರ್ಷಗಳ ಹಿಂದೆ ಅಂದು ವಾರ್ಕಳ ಶಿವಗಿರಿ ಆಶ್ರಮದಲ್ಲಿ ನಿಂಬೆಹಣ್ಣಿನ ಜ್ಯೂಸ್, ಐಸ್‍ಕ್ರೀಮ್, ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದ ಆನ್ಯಿ ಶಿವಾಳ ಈ ಕೇರಳದ ವೆಕಾಲ್ ಪೊಲೀಸ್ ಠಾಣೆಯ ಎಸ್ ಐ ಆಗಿ ನೇಮಕಗೊಂಡಿದ್ದಾರೆ. ಒಂದರ ಹಿಂದೆ ಒಂದು ಕಷ್ಟಗಳು ಬಂದರೂ ಅದನ್ನು ಮೆಟ್ಟಿ ನಿಂತು ಸಾಧನೆ ಮಾಡಿ ಅಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ಆನ್ಯಿ ಶಿವಾಳರಿಗೆ 18 ವರ್ಷದವಳಾಗಿದ್ದಾಗ ಮದುವೆ ಆಗಿದ್ದು, ಕೈಗೆ ಮಗು ಕೊಟ್ಟ ಗಂಡ ಎಂಬ ಪ್ರಾಣಿ ತೊರೆದು ಹೋಗಿದ್ದ. ಗಂಡನಿಂದ ದೂರವಾಗಿ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದ ಆನ್ಯಿ ಜೀವನ ನಿರ್ವಹಣೆಗಾಗಿ ನಿಂಬೆಹಣ್ಣಿನ ಜ್ಯೂಸ್ ಮತ್ತು ಐಸ್ ಕ್ರೀಂ ಮಾರಿ ಜೀವನ ನಡೆಸುತ್ತಿದ್ದರು.
ಹೀಗೆ ಕಷ್ಟದ ಜೀವನ ನಡೆಸುತ್ತಿದ್ದ ಆನ್ಯಿಗೆ ಹಣ ಹಾಗೂ ಜೀವನ ಮಾರ್ಗದರ್ಶನ ನೀಡಿದ ಪೊಲೀಸ್ ಇಲಾಖೆಯಲ್ಲಿ ಸಹಾಯಕಿ ಆಗಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಮಹಿಳೆ ನೆರವು ನೀಡಿದರು. ಆನ್ಯಿ ನೀನು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆ ಬರಿ. ಜೀವನವನ್ನು ದಿಟ್ಟವಾಗಿ ಎದುರಿಸಬೇಕು ಎಂದರೆ ನೀನೊಬ್ಬ ಪೊಲೀಸ್ ಅಧಿಕಾರಿ ಆಗಬೇಕಮ್ಮಾ ಅಂದಿದ್ದರು. ಅದನ್ನೇ ಜೀವನದ ಗುರಿಯಾಗಿ ಸ್ವೀಕರಿಸಿದ ಆ್ಯನಿ ಕಷ್ಟಗಳ ನಡುವೆಯೂ ಚೆನ್ನಾಗಿ ಓದಿ ಪರೀಕ್ಷೆ ಬರೆದು ಕನಸು ನನಸು ಮಾಡಿಕೊಂಡಿದ್ದಾರೆ.
2016ರಲ್ಲಿ ಸಾಲ ಮಾಡಿ ಸಬ್ ಇನ್ಸ್ಪೆಕ್ಟರ್ ಆನ್ಯಿ ಪರೀಕ್ಷೆ ಬರೆದಿದ್ದಾರೆ. ಒಂದೂವರೆ ವರ್ಷದ ನಂತರ ತರಬೇತಿ ಮುಗಿಸಿ ಕೇರಳದ ವೆರಕಾಲ್‍ದಲ್ಲಿ ಎಸ್‍ಐ ಆಗಿ ಇತ್ತೀಚೆಗೆ ನೇಮಕಗೊಂಡಿದ್ದಾರೆ.
ಮಗುವಿನ ಜೀವನ ರೂಪಿಸುವ ಜೊತೆಗೆ ತನ್ನ ಜೀವನವನ್ನು ಸಾಧನೆಯ ಹಾದಿಯಲ್ಲಿ ನಡೆಸಿಕೊಂಡು ಬಂದ ಆನ್ಯಿಗೆ ಕೇರಳದ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಶುಭ ಕೋರಿದ್ದಾರೆ.