ಭಾರತ ಯುವಕರ ತಂಡ 4X400ಮೀ. ರಿಲೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕಿರಿಯರ ವಿಶ್ವಕಪ್ ಅಥ್ಲೆಟಿಕ್ಸ್ ನಲ್ಲಿ ಇತಿಹಾಸ ನಿರ್ಮಿಸಿದೆ.
ನೈರೋಬಿಯಲ್ಲಿ ಬುಧವಾರ ನಡೆದ 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ನ ಪುರುಷರ ರಿಲೇಯಲ್ಲಿ ಭಾರತ ಕಂಚಿನ ಪದಕ ಗೆಲ್ಲುವ ಮೂಲಕ ಒಟ್ಟಾರೆ 5 ಪದಕ ಗೆದ್ದ ಸಾಧನೆ ಮಾಡಿದೆ.
ಭಾರತ್ ಎಸ್., ಪ್ರಿಯಾ ಮೋಹನ್, ಸಮ್ಮಿ ಮತ್ತು ಕಪಿಲ್ ಅವರನ್ನೊಳಗೊಂಡ ಭಾರತ ತಂಡ 3:20:60 ನಿಮಿಷದಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ಪಡೆಯಿತು. ನೈಜಿರಿಯಾ ತಂಡ 3:19:70 ನಿಮಿಷದಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಗೆದ್ದರೆ 3:19:80 ಬೆಳ್ಳಿ ಪದಕ ಗೆದ್ದುಕೊಂಡಿತು.
ಭಾರತ ಅತ್ಯುತ್ತಮ ಎರಡನೇ ತಂಡವಾಗಿ ಫೈನಲ್ ಪ್ರವೇಶಿಸಿತ್ತು. ಆದರೆ ಕೊನೆಯ ಹಂತದಲ್ಲಿ ಎಡವಿದ್ದರಿಂದ ಬೆಳ್ಳಿ ಪದಕ ಗೆಲ್ಲುವ ಅವಕಾಶದಿಂದ ವಂಚಿತವಾಯಿತು.