ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಉತ್ತಮ ಆರಂಭ ಪಡೆದರೂ ಭೋಜನ ವಿರಾಮಕ್ಕೂ ಮುನ್ನವೇ ಆರಂಭಿಕರನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿದೆ.
ಸೌಥ್ ಹ್ಯಾಂಪ್ಟನ್ ಮೈದಾನದಲ್ಲಿ ಶನಿವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ತಂಡ ಭೋಜನ ವಿರಾಮದ ನಂತರ ಮೊದಲ ಇನಿಂಗ್ಸ್ ನಲ್ಲಿ 3 ವಿಕೆಟ್ ಕಳೆದುಕೊಂಡು 78 ರನ್ ಗಳಿಸಿದೆ.
ಅಡ್ಡಾದಿಡ್ಡಿ ಬೀಸುತ್ತಿದ್ದ ಭಾರೀ ಗಾಳಿಯ ನಡುವೆ ಅಖಾಡಕ್ಕೆ ಇಳಿದ ಭಾರತ ತಂಡಕ್ಕೆ ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ ಉತ್ತಮ ಆರಂಭ ನೀಡಿದರು. ಆದರೆ ಇಬ್ಬರು ಒಂದು ರನ್ ಅಂತರದಲ್ಲಿ ವಿಕೆಟ್ ಕಳೆದುಕೊಂಡರು.
ರೋಹಿತ್ ಶರ್ಮ 68 ಎಸೆತಗಳಲ್ಲಿ 6 ಬೌಂಡರಿ ಸೇರಿದ 34 ರನ್ ಗಳಿಸಿ ಜೇಮಿನ್ಸನ್ ಗೆ ವಿಕೆಟ್ ಒಪ್ಪಿಸಿದರೆ, ಶುಭಮನ್ ಗಿಲ್ 64 ಎಸೆತಗಳಲ್ಲಿ 3 ಬೌಂಡರಿ ಒಳಗೊಂಡ 28 ರನ್ ಬಾರಿಸಿ ಔಟಾದರು. ಚೇತೇಶ್ವರ್ ಪೂಜಾರ (8) ವಿಫಲರಾದರೆ ಅಜಿಂಕ್ಯ ರಹಾನೆ ಮತ್ತು ನಾಯಕ ವಿರಾಟ್ ಕೊಹ್ಲಿ ಖಾತೆ ತೆರೆಯದೇ ಕ್ರೀಸ್ ನಲ್ಲಿದ್ದರು.