ಕಂಟಪೂರ್ತಿ ಕುಡಿದು ಒಂಟಿ ಮಹಿಳೆ ಮನೆ ನುಗ್ಗಿದ ಭೂಪನಿಗೆ ಗ್ರಾಮಸ್ಥರಿಂದ ಧರ್ಮದೇಟು..

ಯಾದಗಿರಿ : ಕಂಟ ಪೂರ್ತಿ ಸಾರಾಯಿ ಕುಡಿದು ದಾರಿ ಬಿಟ್ಟವನಿಗೆ ಗ್ರಾಮಸ್ಥರಿಂದ ಧರ್ಮದೇಟು ಬಿದ್ದಿರುವ ಘಟನೆ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅದೇ ಗ್ರಾಮದ ಜಿಲಾನಿ ಅನ್ನೋ ಕಾಮುಕ ವ್ಯಕ್ತಿ ಕಂಠಪೂರ್ತಿ ಕುಡಿದು ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿದ್ದಾನೆ. ಏಕಾಏಕಿಯಾಗಿ ಮನೆಗೆ ನುಗ್ಗಿದ ಆ ವ್ಯಕ್ತಿಯನ್ನು ಕಂಡು ಮಹಿಳೆ ಜೋರು ಧ್ವನಿಯಲ್ಲಿ ಕಿರಿಚಿದ್ದಾಳೆ. ಅದನ್ನು ಕಂಡ ಅಕ್ಕ ಪಕ್ಕದ ಜನರು ಮಹಿಳೆಗೆ ಧಾವಿಸಿ ಜಿಲಾನಿಯನ್ನು ಬಂಧಿಸಿ ತೆಂಗಿನ ಮರಕ್ಕೆ ಕಟ್ಟಿ ಹಾಕಿದ್ದಾರೆ.
ಬಳಿಕ ಜನರು ಮನಬಂದಂತೆ ಥಳಿಸಿದಾಗ ಕಾಮುಕ ಜಿಲಾನಿ ನಂದು ತಪ್ಪಾಗಿದೆ, ನನ್ನ ಮರ್ಯಾದೆ ಹೋಗುತ್ತೆ ಬಿಟ್ಟು ಬಿಡಿ ಎಂದು ಅಂಗಲಾಚಿದ್ದಾನೆ. ಅಷ್ಟಕ್ಕೂ ಸುಮ್ಮನಾಗದ ಗ್ರಾಮಸ್ಥರು ಆ ವ್ಯಕ್ತಿಯನ್ನು ರಾತ್ರಿ ಎಲ್ಲ ಮರಕ್ಕೆ ಕಟ್ಟಿ ಹಾಕಿ ಅವನಿಗೆ ಶಿಕ್ಷೆ ನೀಡಿದ್ದಾರೆ. ಇಂತಹ ಕೃತ್ಯದಿಂದಾಗಿ ಹಳ್ಳಿಯಲ್ಲಿನ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದ್ದು, ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಇನ್ನು ಮರ್ಯಾದೆಗೆ ಅಂಜಿಕೊಂಡಿರುವ ಮಹಿಳೆ ದೂರು ಸಹ ನೀಡಲು ಹಿಂದೇಟು ಹಾಕುತಿದ್ದಾಳೆ.