ಮಹಿಳೆಯೊಬ್ಬಳನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಲ್ಲೆ ಅಲ್ಲ, ಗ್ಯಾಂಗ್ ರೇಪ್ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ನಾಲ್ವರು ಕಿಡಿಗೇಡಿಗಳ ತಂಡ ಮಹಿಳೆಯನ್ನು ಸಂಪೂರ್ಣ ನಗ್ನಗೊಳಿಸಿ ಕಬ್ಬಿನ ಜಲ್ಲೆಯಿಂದ ಮನಬಂದಂತೆ ಥಳಿಸಿದ್ದರು. ಆಕೆಯನ್ನ ಲೈಂಗಿಕವಾಗಿ ಬಳಸಿಕೊಂಡು ಪೈಶಾಚಿಕ ಕೃತ್ಯ ಎಸಗಿದ ವೀಡಿಯೋ ವೈರಲ್ ಆಗುತ್ತಿದ್ದಂತೆ ಬೆನ್ನುಬಿದ್ದ ಪೊಲೀಸರು ಈ ಘಟನೆ ನಡೆದು 8 ತಿಂಗಳು ಆಗಿದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
ಒಂದುಕಡೆ ಮಹಿಳೆಯನ್ನ ಸಂಪೂರ್ಣ ನಗ್ನಗೊಳಿಸಿ ಕಬ್ಬಿನ ಜಲ್ಲೆಯಿಂದ ಮನಬಂದಂತೆ ಥಳಿಸುತ್ತಿರುವ ಕಿಡಿಗೇಡಿಗಳು.. ಮಹಿಳೆಗೆ ನಗ್ನ ಮಾಡಿ ಲೈಂಗಿಕ ಕಿರುಕುಳ ಕೊಟ್ಟು ಕಾಮತೃಷೆ ತೀರಿಸಿಕೊಳ್ಳುತ್ತಿರುವ ಮತ್ತೊರ್ವ ವ್ಯಕ್ತಿ. ಮತ್ತೊಂದೆಡೆ ಕಾಲಿಗೆ ಬಿಳ್ತಿನಿ ಬಿಟ್ಟು ಬಿಡ್ರಪ್ಪ ಎಂದು ಗೋಗರೆಯುತ್ತಿದ್ದರೂ ಥಳಿಸುತ್ತಿರುವ ಮತ್ತೊಂದು ಗುಂಪು.
ಈ ದೃಶ್ಯಗಳನ್ನೊಳಗೊಂಡ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಯಾದಗಿರಿ ಜಿಲ್ಲೆಯಲ್ಲಿ ನಡೆದ ಈ ಪೈಶಾಚಿಕ ಕೃತ್ಯದಿಂದ ಇಡೀ ರಾಜ್ಯವಲ್ಲದೇ ದೇಶವೇ ತಲೆ ತಗ್ಗಿಸುವಂತಾಗಿದೆ.
ಶಹಾಪುರ ತಾಲೂಕಿನ ರಸ್ತಾಪುರ ಕ್ರಾಸ್ ಬಳಿಯ ಕಮಾನ್ ಎದುರುಗಡೆಯ ನಿರ್ಜನ ಪ್ರದೇಶದಲ್ಲಿ ನಾಲ್ಕು ಜನ ಕಾಮುಕರ ತಂಡ ಚಟ್ನಳ್ಳಿ ಗ್ರಾಮದ ಮಹಿಳೆಯನ್ನ ಹೊತ್ತೊಯ್ದು ಈ ಕೃತ್ಯ ಎಸಗಿದ್ದಾರೆ. ನಂತರ ಮಹಿಳೆಯ ಬಳಿಯಿದ್ದ ಮೊಬೈಲ್ ಹಾಗೂ 5 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ.
ಬಂಧಿತರಲ್ಲಿ ನಿಂಗರಾಜ್ ಬೇವಿನಹಳ್ಳಿ ಹೋಂ ಗಾರ್ಡ್ ಸಿಬ್ಬಂದಿಯಾಗಿದ್ದು, ಪಿಎಸ್‌ಐ ವಾಹನದ ಚಾಲಕನಾಗಿದ್ದ. ಶಹಾಪುರ ಪಟ್ಟಣ ಮೂಲದ 24 ವರ್ಷದ ನಿಂಗರಾಜ್ ಬೇವಿನಹಳ್ಳಿ, 23 ವರ್ಷದ ಅಯ್ಯಪ್ಪ ನಾಟಿಕರ್, 28 ವರ್ಷದ ಭೀಮಾಶಂಕರ ದೋರನಹಳ್ಳಿ ಮತ್ತು 22 ವರ್ಷದ ಶರಣು ನಾಯ್ಕೋಡಿ ಸೇರಿದಂತೆ ನಾಲ್ವರನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ದೌರ್ಜನ್ಯಗೊಳಗಾದ ಮಹಿಳೆಯು ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದು, ಈಕೆಯ ಬಳಿ ಹಣ ಇರ್ತಾವೆ ಅಂತಾ ನಾಲ್ಕು ಜನ ಈ ರೀತಿ ಕೃತ್ಯ ಎಸಗಿದ್ದಾರೆ ಅಂತಾ ಬಂಧನದ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.