ರಾಯಚೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಿಸ್ತಿನ ನಾಯಕ, ಬಿಜೆಪಿ ಶಿಸ್ತಿನ ಪಕ್ಷ, ಊಹಾಪೋಹಗಳಿಗೆ ಕಿವಿಗೊಡದೆ ಅವರ ಮಾತನ್ನು ನಂಬಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಸಹಿ ಸಂಗ್ರಹ ಸಂಪ್ರದಾಯವೇ ಇಲ್ಲ. ಅದು ಬಿಜೆಪಿ ಪದ್ಧತಿ ಅಲ್ಲ. ಪರವಾಗಲಿ ವಿರೋಧವಾಗಲಿ ಸಹಿ ಸಂಗ್ರಹ ಮಾಡಕೂಡದು ಎಂದು ಪಕ್ಷದ ವರಿಷ್ಠರು ತಿಳಿಸಿದ್ದಾರೆ. ಅವರು ಮಾಡಿದ್ದಾರಂತೆ, 60 ಜನ ಸಹಿ ಹಾಕಿದ್ದಾರಂತೆ ಎಂಬ ಅಂತೆ ಕಂತೆ ಬಿಡಿ. ಸಹಿ ಮಾಡಿದ್ದು ಯಾರಾದರೂ ನೋಡಿದ್ದಾರಾ ಎಂದು ಮರುಪ್ರಶ್ನಿಸಿದರು.
ಶಾಸಕರ ಸಹಿ ವಿಚಾರದ ಬಗ್ಗೆ ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟ ಹೇಳಿಕೆ ನೀಡಿದ್ದಾರೆ. ಇನ್ನಾದರೂ ವಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕುತಂತ್ರ ರಾಜಕಾರಣ ಮಾಡುವುದನ್ನು ಬಿಡಲಿ ಎಂದರು.