ಸೊಳ್ಳೆಗಳು ನೋಡಲು ಚಿಕ್ಕದಾದರೂ ಅವುಗಳಿಂದ ಹಲವು ಮಾರಕ ಕಾಯಿಲೆಗಳು ಹರಡುತ್ತದೆ. ಇವುಗಳನ್ನು ಓಡಿಸಲು ಬತ್ತಿಗಳನ್ನು, ಲಿಕ್ವಿಡ್ ಗಳನ್ನು ಬಳಸುವ ಬದಲು ಈ ಟಿಪ್ಸ್ ಫಾಲೋ ಮಾಡಿ. ಇದರಿಂದ ದೇಹದ ಆರೋಗ್ಯಕ್ಕೂ ಸಮಸ್ಯೆ ಆಗದು. ಸೊಳ್ಳೆಗಳ ಕಾಟ ಕೂಡ ಇರದು.
ಒಂದು ಮಣ್ಣಿನ ಹಣತೆಗೆ ಬೆಳ್ಳುಳ್ಳಿ ಎಸಳನ್ನು ಜಜ್ಜಿ ಹಾಕಿ ಅದಕ್ಕೆ ಕರ್ಪೂರ ಮತ್ತು ಓಂಕಾಳು, ತುಪ್ಪ ಹಾಕಿ ಅದಕ್ಕೆ ಬೆಂಕಿ ಹಚ್ಚಿ. ಅದನ್ನು ಮನೆಯೊಳಗೆ ಹರಡುವಂತೆ ಮಾಡಿ ಅದರಿಂದ ಬರುವ ವಾಸನೆಗೆ ಮನೆಯೊಳಗೆ ಬಂದ ಸೊಳ್ಳೆಗಳು ಓಡಿಹೋಗುತ್ತವೆ. ಇದರಿಂದ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಬಹುದು.
ಇನ್ನು ಒಂದು ಅಗಲವಾದ ಪಾತ್ರೆಗೆ ಬೇವಿನ ಎಲೆಗಳನ್ನು ಹಾಕಿ ಅದಕ್ಕೆ ಬೆಂಕಿ ಹಾಕಿ. ಇದರ ಹೊಗೆಯನ್ನು ಮನೆಯ ಎಲ್ಲೆಡೆ ಹಿಡಿದರೆ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು.
ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳಿ. ಆದಷ್ಟು ಗಲೀಜು ಇಲ್ಲದಂತೆ ನೋಡಿಕೊಳ್ಳಿ. ನೆಲಕ್ಕೊರೆಸುವಾಗ ಅದಕ್ಕೆ ಎರಡು ಕರ್ಪೂರವನ್ನು ಹಾಕಿ ಆ ನೀರಿನಿಂದ ಸ್ವಚ್ಛ ಮಾಡಿ.