‘ಯುದ್ಧ ಅಭ್ಯಾಸ 2020’: ಭಾರತ-ಅಮೆರಿಕಾ ಸೈನಿಕರು ಭಾಗಿ

ಬಿಕಾನೇರ್: ಭಾರತ ಮತ್ತು ಅಮೆರಿಕ ಸೇನೆ ಜಂಟಿಯಾಗಿ ರಾಜಸ್ಥಾನದ ಬಿಕಾನೇರ್ ವಾಯುನೆಲೆಯಲ್ಲಿ ‘ಯುದ್ಧ ಅಭ್ಯಾಸ 2020’ ತರಬೇತಿ ನಡೆಸುತ್ತಿದೆ. ಈ ಅಭ್ಯಾಸದಲ್ಲಿ ಭಾರತ ಮತ್ತು ಅಮೆರಿಕ ಮಿಲಿಟರಿ ಪಡೆಗಳು ತಾಲೀಮು ನಡೆಸುತ್ತಿವೆ. ನಿನ್ನೆಯಿಂದ ಆರಂಭವಾದ ಯುದ್ಧ ಅಭ್ಯಾಸ ತಾಲೀಮು ಫೆ.21ರವರೆಗೆ ನಡೆಯಲಿದೆ. ಇದು ಉಭಯ ದೇಶಗಳ ನಡುವೆ ರಕ್ಷಣಾ ಸಹಕಾರವನ್ನು ಹೆಚ್ಚಿಸುತ್ತದೆ ಎಂದು ಸೇನಾ ಮೂಲಗಳು ಹೇಳಿವೆ. ಇದರಲ್ಲಿ ಭಾರತದ 250 ಮತ್ತು ಅಮೆರಿಕಾದ 250 ಸೈನಿಕರು ಭಾಗವಹಿಸಿದ್ದಾರೆ.

ಇದು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಉಭಯದೇಶಗಳ ಸಹಭಾಗಿತ್ವವನ್ನು ವೃದ್ಧಿಸುತ್ತದೆ. ಇದು 16 ನೇ ಆವೃತ್ತಿಯ ಕಾರ್ಯಕ್ರಮವಾಗಿದ್ದು, ವಿಶ್ವಸಂಸ್ಥೆಯ ಆದೇಶದಡಿಯಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳ ಮೇಲೆ ಹೆಚ್ಚಾಗಿ ಕೇಂದ್ರೀಕರಿಸುತ್ತದೆ ಎಂದು ಹಿರಿಯ ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 15ನೇ ಆವೃತ್ತಿಯ ಯುದ್ಧ ಅಭ್ಯಾಸ ಕಾರ್ಯಕ್ರಮ ಅಮೆರಿಕಾದ ಸಿಯಾಟಲ್ ನಲ್ಲಿ ನಡೆದಿತ್ತು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!