ಗದಗ : ಗರ್ಭಿಣಿಯರಿಗೆ ಸೀಮಂತ ಮಾಡುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಆದರೆ ಇಲ್ಲಿ ನಾಯಿಗೂ ಸೀಮಂತ ಕಾರ್ಯ ನಡೆದಿದೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಘಟನೆ ಜರುಗಿದ್ದು, ಪಟ್ಟಣದ ಶ್ವಾನಪ್ರೀಯ ಅಶೋಕ ಸೊರಟೂರ ದಂಪತಿಗಳಿಂದ ಶ್ವಾನಕ್ಕೆ ಸೀಮಂತ ಕಾರ್ಯ ನಡೆದಿದೆ. ತಮ್ಮ ಮನೆ ಅಕ್ಕಪಕ್ಕದ ಮಹಿಳೆಯರನ್ನ ಆಮಂತ್ರಿಸಿ ಸೀಮಂತ ಕಾರ್ಯ ನೆರವೇರಿಸಿದ್ದಾರೆ.
ಮಹಿಳೆಯರಿಂದ ಸೋಬಾನ ಪದ ಹೇಳಿಸಿ, ನಾಯಿಗೆ ಆರತಿ ಕಾರ್ಯ ನಡೆದಿದ್ದು, ಶ್ವಾನಪ್ರೀಯ ದಂಪತಿ ಸಂಭ್ರಮಕ್ಕೆ ನೆರೆಹೊರೆಯವರು ಜೊತೆಯಾದರು. ನೆಚ್ಚಿನ ಸಾಕು ನಾಯಿಗೆ ಸೀಮಂತ ಕಾರ್ಯ ಮಾಡಿ ದಂಪತಿ ಪ್ರೀತಿ ಮೆರೆದಿದ್ದಾರೆ.