ದೆಹಲಿಯ : ಇಂದು (ಆಗಸ್ಟ್ 4)ದೆಹಲಿಯ ಪಂಚಶೀಲ ಉದ್ಯಾನವನದಲ್ಲಿರುವ ಮೊಹಲ್ಲಾ ಕ್ಲಿನಿಕ್‌ಗೆ ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Health Minister Dinesh Gundu Rao) ಭೇಟಿ ನೀಡಿ, ಮೂಲಸೌಕರ್ಯ ಸೌಲಭ್ಯಗಳು, ಕೆಲಸದ ವಿಧಾನವನ್ನು ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ದೆಹಲಿ ಆರೋಗ್ಯ ಸಚಿವ ಎಚ್.ಎನ್.ಸೌರಭ್ ಭಾರದ್ವಾಜ್ ಅವರೊಂದಿಗೆ ಭೇಟಿಯಾಗಿ ಮೊಹಲ್ಲಾ ಕ್ಲಿನಿಕ್ ಸೌಲಭ್ಯಗಳ ಬಗ್ಗೆ ಸಭೆ ನಡೆಸಿದ್ದಾರೆ. ಬಳಿಕ ಮೊಹಲ್ಲಾ ಕ್ಲಿನಿಕ್‌ಗೆ ಭೇಟಿ ನೀಡಿ ಮೂಲಸೌಕರ್ಯ ಸೌಲಭ್ಯಗಳು, ಕೆಲಸದ ವಿಧಾನವನ್ನು ವೀಕ್ಷಿಸಿದರು ಮತ್ತು ಕೆಲಸ ಮಾಡುವ ಸಿಬ್ಬಂದಿಯ ಕಲ್ಯಾಣದ ಬಗ್ಗೆ ಮಾಹಿತಿ ಪಡೆದರು.