ಪಟಾಕಿ ಗೋದಾಮಿನಲ್ಲಿ ಸ್ಫೋಟಕ್ಕೆ ಕಟ್ಟಡವೇ ಕುಸಿತಗೊಂಡು 9 ಮಂದಿ ಸಾವನ್ನಪ್ಪಿದಲ್ಲದೇ,15 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ದುರಂತ ಘಟನೆ ತಮಿಳುನಾಡಿನ (Tamil Nadu) ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಪಟಾಕಿ ಗೋದಾಮಿನಲ್ಲಿ ಸ್ಫೋಟಗೊಂಡ ತಕ್ಷಣ ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದಾರೆ. ಬಳಿಕ ಪರಿಶೀಲನೆ ನಡೆಸಿದಾಗಿ ಗೋದಾಮಿನ ಮಾಲೀಕ ರವಿ, ಅವರ ಪತ್ನಿ ಜಯಶ್ರೀ, ಪುತ್ರಿ ರುತಿಕ್ಕ ಮತ್ತು ಮಗ ರುತೀಶ್ ಮೃತ ಪಟ್ಟಿರುವುದು ಬೆಳಕಿಗೆ ಬಂದಿದೆ. ಗೋದಾಮಿನ ಬಳಿ ರೆಸ್ಟೋರೆಂಟ್ ನಡೆಸುತ್ತಿದ್ದ ರಾಜೇಶ್ವರಿ, ವೆಲ್ಡಿಂಗ್ ಶಾಪ್ ಹೊಂದಿದ್ದ ಇಬ್ರಾಹಿಂ ಮತ್ತು ಇಬ್ರಾಹಿಂ, ವಾಟರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸರಸು ಮತ್ತು ಜೇಮ್ಸ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ