ಬೆಂಗಳೂರು: ಚಂದ್ರಯಾನ-3 (Chandrayaan-3) ಗಗನ ನೌಕೆಯು ಭೂಮಿಯಿಂದ ಹಾರಿ 22 ದಿನಗಳ ಬಳಿಕ ಶನಿವಾರ ಚಂದ್ರನ ಕಕ್ಷೆಗೆ ಸೇರಿದ ಮೊದಲ ವಿಡಿಯೋ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ವೀಡಿಯೋ ಹಂಚಿಕೊಂಡಿದೆ.
ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಇಲ್ಲಿಯವರೆಗೆ ಸುಗಮವಾಗಿ ಕಾರ್ಯಚರಣೆ ನಡೆಸಿದೆ. ಚಂದ್ರಯಾನ-3 ಗಗನನೌಕೆಯನ್ನ ಸೇರಿಸುವ ಲೂನಾರ್ ಆರ್ಬಿಟ್ ಇನ್ಸೆರ್ಷನ್ ಪ್ರಕ್ರಿಯೆಯನ್ನು ಇಸ್ರೋ ಪೂರ್ಣಗೊಳಿಸಿದೆ ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ 23 ರಂದು ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.