Sports News

2024ರ ಟಿ20 ವಿಶ್ವಕಪ್ ದಿನಾಂಕ ಬಹಿರಂಗ : ಅಮೇರಿಕಾ & ವೆಸ್ಟ್ ಇಂಡೀಸ್ ಜಂಟಿ ಆತಿಥ್ಯ

2024ರಲ್ಲಿ ಟಿ20 ವಿಶ್ವಕಪ್ (T20 World Cup 2024) ನಡೆಯಲ್ಲಿದೆ. ಈ ಚುಟುಕು ವಿಶ್ವ ಸಮರಕ್ಕೆ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ (USA And West Indies) ಜಂಟಿಯಾಗಿ ಆತಿಥ್ಯ ವಹಿಸುತ್ತಿದೆ. ಈ ಚುಟುಕು ಸಮರದ ದಿನಾಂಕ ಹೊರಬಿದ್ದಿದೆ. ESPNcricinfo ಹಾಗೂ ಇನ್​ಸೈಡ್​ ಸ್ಫೋರ್ಟ್​ ವೆಬ್‌ಸೈಟ್‌ಗಳ ವರದಿಯ ಪ್ರಕಾರ, 2024ರ ಟಿ20 ವಿಶ್ವಕಪ್ ಮುಂದಿನ ವರ್ಷ ಜೂನ್ 4 ರಿಂದ 30 ರವರೆಗೆ ನಡೆಯಲಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಕಳೆದೆರಡು ಟಿ20 ವಿಶ್ವಕಪ್ ಆವೃತ್ತಿಗಳನ್ನು ಅಕ್ಟೋಬರ್ ತಿಂಗಳಲ್ಲಿ ಆಯೋಜನೆ ಮಾಡಲಾಗಿತ್ತು. ಆದರೆ ಈ ಬಾರಿ ಜೂನ್ ತಿಂಗಳಲ್ಲಿ ಚುಟುಕು ವಿಶ್ವ ಸಮರವನ್ನು ನಡೆಸಲು ತೀರ್ಮಾನಿಸಲಾಗಿದೆ.

ಕೆಲವು ಸ್ಥಳಗಳ ಶಾರ್ಟ್‌ಲಿಸ್ಟ್

ಐಸಿಸಿ ಅಧಿಕಾರಿಗಳು ಯುಎಸ್​ಎಯಲ್ಲಿ ಟಿ20 ವಿಶ್ವಕಪ್​ಗೆ ಆತಿಥ್ಯವಹಿಸುವಂತಹ ಸಂಭಾವ್ಯ ಸ್ಥಳಗಳ ಪರಿಶೀಲನೆ ನಡೆಸಿತ್ತಿದೆ. ಕೆಲವು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದಾರೆ. ಅಮೆರಿಕ ಮೊದಲ ಬಾರಿಗೆ ಗ್ಲೋಬಲ್ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್​ಎಯ 10 ಸ್ಥಳಗಳಲ್ಲಿ ಪಂದ್ಯಾವಳಿ ನಡೆಯಲ್ಲಿದ್ದು, ಯುನೈಟೆಡ್ ಸ್ಟೇಟ್ಸ್, ಮೋರಿಸ್ವಿಲ್ಲೆ, ಡಲ್ಲಾಸ್, ನ್ಯೂಯಾರ್ಕ್ ಜೊತೆಗೆ ಫ್ಲೋರಿಡಾದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.

ಈ ವಿಶ್ವಕಪ್‌ನ ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, 2024ರ ಟಿ20 ವಿಶ್ವಕಪ್​ನಲ್ಲಿ ಅಮೆರಿಕದ ಕ್ರಿಕೆಟ್ ತಂಡವೂ ಆಡಲಿದೆ. ಈ ತಂಡ ಆತಿಥೇಯರಾಗಿ ಅರ್ಹತೆ ಪಡೆದಿದೆ. ಅಮೆರಿಕಕ್ಕೆ ಆತಿಥ್ಯ ವಹಿಸಲು ಅನುವು ಮಾಡಿಕೊಡುವುದರೊಂದಿಗೆ ಐಸಿಸಿ, ಹೊಸ ದೇಶಗಳಲ್ಲಿ ಕ್ರಿಕೆಟ್ ಅನ್ನು ವಿಸ್ತರಿಸುವ ಯೋಜನೆಯನ್ನು ಹಾಕಿಕೊಂಡಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!