ಭಾರತದಲ್ಲಿ ಶುರುವಾಗಲಿರುವ ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ ಕ್ರಿಕೆಟ್ ಗೆ ಆಸ್ಟ್ರೇಲಿಯಾ 18 ಸದಸ್ಯರನ್ನೊಳಗೊಂಡ ಬಲಿಷ್ಠ ತಂಡವನ್ನು ಪ್ರಕಟಿಸಲಾಗಿದೆ. ಈ ಬಲಿಷ್ಠ ತಂಡದ ನಾಯಕತ್ವ ಎಂದಿನಂತೆ ಆಲ್ರೌಂಡರ್ ಪ್ಯಾಟ್ ಕಮಿನ್ಸ್ ಅವರಿಗೆ ವಹಿಸಲಾಗಿದೆ.
ಇದೇ ತಂಡ ದಕ್ಷಿಣ ಆಫ್ರಿಕಾದಲ್ಲಿ ನಡೆಯಲ್ಲಿರುವ ಐದು ಪಂದ್ಯಗಳ ಏಕದಿನ ಸರಣಿ ಹಾಗೂ ಭಾರತದಲ್ಲಿ ನಡೆಯಲ್ಲಿರುವ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಪ್ರಸ್ತುತ 18 ಸದಸ್ಯರ ತಂಡ ಪ್ರಕಟವಾಗಿದ್ದು, ಏಕದಿನ ವಿಶ್ವಕಪ್ ದೃಷ್ಟಿಯಿಂದ ತಂಡವನ್ನು 15 ಸದಸ್ಯರಿಗೆ ಸೀಮಿತಗೊಳಿಸುವ ನಿರೀಕ್ಷಿಸಲಾಗಿದೆ. ತಂಡದಲ್ಲಿ ಯಾರಿಗೆಲ್ಲ ಅವಕಾಶ ಸಿಕ್ಕಿದೆ ಎಂಬುದನ್ನು ನೋಡುವುದಾದರೆ.. ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಮಾರ್ನಸ್ ಲಬುಶೆನ್ಗೆ ನಿರಾಸೆಯೂಂಟಾಗಿದೆ. ಈ ಹಿಂದೆ ಭಾರತ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ತಂಡದಲ್ಲಿದ್ದ ಲಬುಶೆನ್ ಆಡಿದ ಮೂರು ಪಂದ್ಯಗಳಲ್ಲಿ ಕೇವಲ 43 ರನ್ ಕಲೆ ಹಾಕಿದ್ದರು.
ಇದುವರೆಗೆ ಆಸ್ಟ್ರೇಲಿಯಾ ಪರ 30 ಏಕದಿನ ಪಂದ್ಯಗಳನ್ನಾಡಿರುವ ಲಬುಶೆನ್ 31.37 ಸರಾಸರಿಯಲ್ಲಿ ಕೇವಲ 847 ರನ್ ಗಳಿಸಿದ್ದಾರೆ. ಇದರಲ್ಲಿ ಕೇವಲ 1 ಶತಕ ಮತ್ತು 6 ಅರ್ಧ ಶತಕಗಳು ಸೇರಿವೆ. 2020 ರಲ್ಲಿ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಲಬುಶೆನ್ಗೆ ಆಸ್ಟ್ರೇಲಿಯ ತಂಡದಲ್ಲಿ ಅವಕಾಶ ಸಿಕ್ಕಿದ್ದರೆ ಮೊದಲ ಸಲ ಏಕದಿನ ವಿಶ್ವಕಪ್ ಆಡುವ ಅವಕಾಶ ಸಿಗುತ್ತಿತ್ತು.
ಆದರೆ, ಅವರನ್ನು ತಂಡದಿಂದ ಕೈಬಿಡುವ ನಿರ್ಧಾರವನ್ನು ಮಂಡಳಿ ಮಾಡಿರುವುದರಿಂದ ಲಬುಶೇನ್ಗೆ ಏಕದಿನ ವಿಶ್ವಕಪ್ ಆಡುವ ಅವಕಾಶ ಕೈತಪ್ಪಿದೆ ಎನ್ನಲಾಗಿದೆ.