ಕಾರು ಅಪಘಾತ (Car accident) ದಿಂದ ಪವಾಡ ಸದೃಶ್ಯವಾಗಿ ಪಾರಾಗಿ ಸದ್ಯ ಚೇತರಿಕೆಯ ಹಂತದಲ್ಲಿರುವ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ (Rishab pant) , ನಡೆದಾಡಲು ಆರಂಭಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಿಷಬ್ ಎರಡು ಫೋಟೊಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಚೇತರಿಕೆಯೆಡೆಗೆ ಒಂದೊಂದೇ ಹೆಜ್ಜೆ ಇಡುತ್ತಿರುವುದಾಗಿ ಶುಭ ಸುದ್ದಿ ನೀಡಿದ್ದಾರೆ.
ಕಳೆದ ವರ್ಷ ಡಿಸೆಂಬರ್ 30ರಂದು ತಮ್ಮ ಹುಟ್ಟೂರು ಉತ್ತರಾಖಂಡ್ (Uttarkhand) ನ ರೂರ್ಕಿಗೆ ಕಾರ್‌ನಲ್ಲಿ ತೆರಳುತ್ತಿದ್ದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ರಿಷಭ್ ಪಂತ್ ಗಾಯಗೊಂಡಿದ್ದರು. ಮಂಡಿಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಕಿರುವುದರಿಂದ ನಡೆಯಲು ಊರುಗೋಲು ಬಳಸಿ ಒಂದೋಂದೇ ಹೆಜ್ಜೆ ಇಡುತ್ತಿರುವುದಾಗಿ ಪಂತ್ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.’ಒಂದು ಹೆಜ್ಜೆ ಮುಂದಕ್ಕೆ, ಒಂದು ಹೆಜ್ಜೆ ದೃಢ, ಒಂದು ಹೆಜ್ಜೆ ಚೇತರಿಕೆಯತ್ತ’ ಎಂದು ಪಂತ್ ತಮ್ಮ ಅಭಿಮಾನಿಗಳಿಗೆ ಸಂದೇಶ ಹಂಚಿದ್ದಾರೆ.
ಇದನ್ನೂ ಓದಿ :- ಡಬಲ್ ಇಂಜಿನ್ ಸರ್ಕಾರ ಕರ್ನಾಟಕದಲ್ಲಿ ಚಮತ್ಕಾರ- ಸಿಎಂ ಟ್ವೀಟ್ ಗೆ ಮೋದಿ ಪ್ರತಿಕ್ರಿಯೆ