Sports NewsState News

ಬೆಳಗಾವಿ ಹುಡುಗನ ಫೀಲ್ಡಿಂಗ್ ಗೆ ಫಿದಾ ಆದ ಸಚಿನ್ ತೆಂಡುಲ್ಕರ್ ..! ಈ ವಿಡಿಯೋ ನೋಡಿ

ಕರ್ನಾಟಕದ ಬೆಳಗಾವಿ ನಗರದ ನಿವಾಸಿ ಕಿರಣ್ ತರಳೇಕರ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯದ ವೇಳೆ ಹಿಡಿದ ಅತ್ಯಧ್ಬುತ ಕ್ಯಾಚ್ ಇದೀಗ ಕ್ರಿಕೆಟ್ ದಿಗ್ಗಜರ ಮನಸೂರೆಗೊಂಡಿದೆ.

ಕರ್ನಾಟಕ (Karnataka) ದ ಬೆಳಗಾವಿ ನಗರದ ನಿವಾಸಿ ಕಿರಣ್ ತರಳೇಕರ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯದ ವೇಳೆ ಹಿಡಿದ ಅತ್ಯಧ್ಬುತ ಕ್ಯಾಚ್ ಇದೀಗ ಕ್ರಿಕೆಟ್ ದಿಗ್ಗಜರ ಮನಸೂರೆಗೊಂಡಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಸೇರಿದಂತೆ ಹಲವು ಕ್ರಿಕೆಟ್ ಆಟಗಾರರು ಕಿರಣ್ ಫೀಲ್ಡಿಂಗ್ಗೆ ಶಹಬಾಸ್ಗಿರಿ ನೀಡಿದ್ದಾರೆ.

 

ಬೆಳಗಾವಿ (Belagavi) ನಗರದ ವ್ಯಾಕ್ಸಿನ್ ಡಿಪೊ ಆವರಣದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ (Cricket) ಪಂದ್ಯಾವಳಿ ನಡೆದಿತ್ತು. ಈ ವೇಳೆ ಸಾಯಿರಾಜ್ ಹಾಗೂ ಎಸ್ಆರ್ ಎಸ್ ಹಿಂದೂಸ್ತಾನ್ ನಿಪ್ಪಾಣಿ ತಂಡದ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಎದುರಾಳಿ ತಂಡದ ಆಟಗಾರ ಬಾರಿಸಿದ ಚೆಂಡನ್ನು ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ ಕಿರಣ್ ತರಳೇಕರ್ ಗಾಳಿಯಲ್ಲಿ ನೆಗೆದು ಹಿಡಿದರು. ಬಳಿಕ ಬೌಂಡರಿ ಲೈನ್ ದಾಟುವ ಮುನ್ನ ಕೈಯಲ್ಲಿದ್ದ ಚೆಂಡನ್ನು ಮೇಲಕ್ಕೆಸೆದರು.

 

ಅದು ಬೌಂಡರಿ ಆಚೆಗೆ ಬೀಳುತ್ತಿರುವುದನ್ನು ಗಮನಿಸಿದ ಕಿರಣ್ (Kiran) ಮತ್ತೆ ಕ್ಷಣಾರ್ಧದಲ್ಲೇ ಗಾಳಿಯಲ್ಲಿ ಹಾರಿ ಚೆಂಡನ್ನು ಫುಟ್ಬಾಲ್ ರೀತಿ ಕಾಲಿನಿಂದ ಒದ್ದು ಗ್ರೌಂಡ್ ಒಳಕ್ಕೆ ಅಟ್ಟಿದರು. ಅಷ್ಟರಲ್ಲಿ ಬೌಂಡರಿ ಆಚೆಗೆ ಹೋಗಿ ಮತ್ತೆ ಒಳಗೆ ಬಂದ ಚೆಂಡನ್ನು ಇನ್ನೊಬ್ಬ ಆಟಗಾರ ಹಿಡಿಯುವಲ್ಲಿ ಯಶಸ್ವಿಯಾದರು.  ಇದನ್ನೂ ಓದಿ : –  ಅಧಿಕಾರಕ್ಕೆ ಬಂದ್ರೆ ಮಹಿಳೆಯರ ಸಾಲ 1 ಲಕ್ಷಕ್ಕೆ, ರೈತರ ಸಾಲ 5 ಲಕ್ಷಕ್ಕೆ ಏರಿಕೆ – ಸಿದ್ದರಾಮಯ್ಯ

ಇದೀಗ ಕಿರಣ್ ಮಾಡಿದ ಅದ್ಭುತ ಫೀಲ್ಡಿಂಗ್ನ ಈ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಈ ವಿಡಿಯೋ ತುಣುಕನ್ನು ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್, ‘ಫುಟ್ಬಾಲ್ ಆಡಲು ಗೊತ್ತಿರುವ ವ್ಯಕ್ತಿಯನ್ನು ನೀವು ಕ್ರಿಕೆಟ್ಗೆ ಕರೆತಂದಾಗ ಹೀಗೇ ಆಗುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾನ್ ಕೂಡ ಕನ್ನಡಿಗನ ಫೀಲ್ಡಿಂಗ್​ಗೆ ಫಿದಾ ಆಗಿದ್ದು, ‘ಇದು ಸರ್ವಕಾಲಿಕ ಶ್ರೇಷ್ಠ ಕ್ಯಾಚ್’ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : –  ರಾಜ್ಯದಲ್ಲಿ SDPI ಬ್ಯಾನ್ ಮಾಡಬೇಕು – ಆರ್ . ಅಶೋಕ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!