ಐಪಿಎಲ್ ಸರಣಿಗೆ ಕೇವಲ ಹದಿಮೂರು ದಿನಗಳು ಬಾಕಿ ಇರುವಾಗಲೇ ಬೆಂಗಳೂರಿನಲ್ಲಿ ಕ್ರಿಕೆಟ್ ಕ್ರೇಜ್ ಜೋರಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತವರಿನ ಪಂದ್ಯಗಳಿಗೆ ಟಿಕೆಟ್ ಖರೀದಿಸಲು ಇಂದಿನಿಂದ ಬಾಕ್ಸ್ ಆಫೀಸ್ ಸೇಲ್ ಶುರುವಾಗಿದ್ದು ಬೆಳಿಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಎಂ.ಚಿನ್ನಸ್ವಾಮಿ ಮೈದಾನದ ಬಳಿ ಜಮಾಯಿಸಿದ್ದಾರೆ.

ಈ ಆವೃತ್ತಿಯಲ್ಲಿ ತವರಿನಲ್ಲಿಮೊದಲ ಪಂದ್ಯವನ್ನ ಆರ್.ಸಿ.ಬಿ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಮೊದಲ ಪಂದ್ಯಕ್ಕೆ ಟಿಕೆಟನ್ನ ಖರೀದಿಸಲು ಇಂದು ಮತ್ತು ಮಾರ್ಚ್ 31ರಂದು ಬೆಳಿಗ್ಗೆ 10:30ರಿಂದ ರಾತ್ರಿ 8:30ರವರೆಗೂ ಅಭಿಮಾನಿಗಳಿಗೆ ಅವಕಾಶವಿದೆ. ಲಕ್ನೋ ವಿರುದ್ಧದ ಪಂದ್ಯದ ಟಿಕೆಟ್ ಖರೀದಿಸಲು ಇಂದು ಮತ್ತು ಏಪ್ರಿಲ್ 8ರಂದು, ಡೆಲ್ಲಿ ವಿರುದ್ಧದ ಪಂದ್ಯದ ಟಿಕೆಟ್ ಖರೀದಿಸಲು ಏಪ್ರಿಲ್ 3 ಮತ್ತು ಏಪ್ರಿಲ್ 13ರಂದು, ಚೆನ್ನೈ ವಿರುದ್ಧದ ಪಂದ್ಯದ ಟಿಕೆಟ್ ಖರೀದಿಸಲು ಏಪ್ರಿಲ್ 14 ಮತ್ತು ಏಪ್ರಿಲ್ 16ರಂದು ಅವಕಾಶವಿದೆ.

ರಾಜಸ್ಥಾನ ವಿರುದ್ಧದ ಪಂದ್ಯದ ಟಿಕೆಟ್ ಖರೀದಿಸಲು ಏಪ್ರಿಲ್ 16 ಮತ್ತು ಏಪ್ರಿಲ್ 21ರಂದು, ಕೊಲ್ಕತ್ತಾ ವಿರುದ್ಧದ ಪಂದ್ಯದ ಟಿಕೆಟ್ ಖರೀದಿಸಲು ಏಪ್ರಿಲ್ 18 ಮತ್ತು ಏಪ್ರಿಲ್ 24ರಂದು ಮತ್ತು ಗುಜರಾತ್ ವಿರುದ್ಧದ ಲೀಗ್‌ನ ಕೊನೆಯ ಪಂದ್ಯದ ಟಿಕೆಟ್ ಖರೀದಿಸಲು ಏಪ್ರಿಲ್ 24 ಮತ್ತು ಮೇ 19ರಂದು ಅವಕಾಶವಿದೆ. ಚಿನ್ನಸ್ವಾಮಿ ಸ್ಟೇಡಿಯಂನ ಗೇಟ್ ನಂ 18 ಮತ್ತು 19ರಂದು ಅಭಿಮಾನಿಗಳು ನೇರವಾಗಿ ಟಿಕೆಟ್ ಖರೀದಿಸಲು ಅವಕಾಶವಿದೆ.