ದೇಶದಲ್ಲಿ ಮೊದಲ ಬಾರಿಗೆ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ 2023 ರ ಹರಾಜು ಪ್ರಕ್ರಿಯೆ ಮುಂಬೈಯಲ್ಲಿ ನಡೆಯುತ್ತಿದೆ. ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ರೂ. 3.4 ಕೋಟಿಗೆ ರಾಯಲ್ ಚಾಲೆಂಜರ್ಸ್(royalchalage) ಬೆಂಗಳೂರು ಪಾಲಾಗಿದ್ದಾರೆ. ಸ್ಮೃತಿ ಮಂದಾನ(smrtimandana) ಅವರ ಮೂಲ ಬೆಲೆ ರೂ.50 ಲಕ್ಷ ಆಗಿತ್ತು. ಭಾರತ ಟಿ-20 ಉಪ ನಾಯಕಿ ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ತೀವ್ರ ಪೈಪೋಟಿ ನಡೆಯಿತು.
Women's IPL Auction | Smriti Mandhana sold to Royal Challengers Bangalore for Rs 3.4 crores, Harmanpreet Kaur to Mumbai Indians for Rs 1.80 crores
— ANI (@ANI) February 13, 2023
ಅಂತಿಮವಾಗಿ ಆರ್ ಸಿಬಿ ಸ್ಮೃತಿ ಮಂದನಾ ಅವರನ್ನು ಖರೀದಿಸುವಲ್ಲಿ ಸಫಲವಾಯಿತು. ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್(harmanprithkour) ಅವರನ್ನು ಮುಂಬೈ ಇಂಡಿಯನ್ಸ್ ರೂ. 1.8 ಕೋಟಿಗೆ ಖರೀದಿಸಿದೆ.
ಅಸ್ಟ್ರೇಲಿಯಾದ ಆಟಗಾರ್ತಿ ಬೆತ್ ಮೂನೀ ರೂ. 2 ಕೋಟಿಗೆ ಗುಜರಾತ್ ಜೈಂಟ್ಸ್ ತಂಡ ಸೇರಿದ್ದಾರೆ. ದಕ್ಷಿಣ ಆಫ್ರಿಕಾದ ಆಟಗಾರ್ತಿ ಶಬ್ನಿಮ್ ಇಸ್ಮಾಯಿಲ್ ಅವರನ್ನು ರೂ.1 ಕೋಟಿಗೆ ಯುಪಿ ವಾರಿಯರ್ಸ್ ತಂಡ ಖರೀದಿಸಿತು. ನ್ಯೂಜಿಲೆಂಡ್ ಆಟಗಾರ್ತಿ ಅಮೆಲಿಯಾ ಕೆರ್ ಮುಂಬೈ ಇಂಡಿಯನ್ಸ್ ಗೆ ರೂ.1 ಕೋಟಿಗೆ ಬಿಕರಿಯಾಗಿದ್ದಾರೆ. ಇದನ್ನೂ ಓದಿ : – ಬೆಳಗಾವಿ ಹುಡುಗನ ಫೀಲ್ಡಿಂಗ್ ಗೆ ಫಿದಾ ಆದ ಸಚಿನ್ ತೆಂಡುಲ್ಕರ್ ..! ಈ ವಿಡಿಯೋ ನೋಡಿ