ಮ್ಯಾಂಚೆಸ್ಟರ್ (Manchester) ನ ಮಾಜಿ ಕ್ರೀಡಾಪಟು ಕ್ರಿಸ್ಟಿಯಾನೋ ರೋನಾಲ್ಡೋ (Cristiano ronaldo) ಅಭಿಮಾನಿಯೊಂದಿಗೆ ದುರ್ವರ್ತನೆ ತೋರಿದ್ದಕ್ಕಾಗಿ 50,000 ಪೌಂಡ್ ಗಳಷ್ಟು ದಂಡ (Fine) ವನ್ನು ವಿಧಿಸಲಾಗಿದ್ದು 2 ಪಂದ್ಯಗಳಿಗೆ ನಿಷೇಧಿಸಲಾಗಿದೆ. ಕಳೆದ ಸೆಷನ್ ನ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಅಭಿಮಾನಿಯೊಬ್ಬರ ಫೋನ್ ನನ್ನು ಕಸಿದು ಎಸೆದಿದ್ದಕ್ಕೆ ಈ ದಂಡವನ್ನು ನಿಷೇಧ ವಿಧಿಸಲಾಗಿದೆ.
ಯಾವುದೇ ದೇಶದಲ್ಲಿ ರೋನಾಲ್ಡೋ ಬೇರೆ ಯಾವುದೇ ಕ್ಲಬ್ ಗೆ ಸೇರಿದರೂ ಈ ನಿಷೇಧ ಅಲ್ಲಿಯೂ ಅನ್ವಯಿಸಲಿದೆ. ಆದರೆ ವಿಶ್ವಕಪ್ ಗೆ ಮಾತ್ರ ಈ ನಿಷೇಧ ಅನ್ವಯಿಸುವುದಿಲ್ಲ. ಕ್ರಿಸ್ಟಿಯಾನೊ ರೋನಾಲ್ಡೋ ನವೆಂಬರ್ 22 ರಂದು ತಕ್ಷಣದಿಂದಲೇ ಜಾರಿಯಾಗುವಂತೆ ಮ್ಯಾಂಚೆಸ್ಟರ್ ಯುನೈಟೆಡ್ ಪ್ರೀಮಿಯರ್ ಲೀಗ್ ತಂಡ ತೊರೆದಿದ್ದಾರೆ ಎಂದು ತಂಡ ಹೇಳಿತ್ತು. ಇಂಗ್ಲೆಂಡ್ ನ ಫುಟ್ಬಾಲ್ ಸಂಘ ರೋನಾಲ್ಡೋ ಅವರ ದುರ್ವರ್ತನೆಗೆ ಈ ದಂಡ ವಿಧಿಸಿದೆ ಎಂದು FI ಹೇಳಿಕೆಯಲ್ಲಿ ತಿಳಿಸಿದೆ. F I ಆರೋಪಗಳನ್ನು ರೋನಾಲ್ಡೋ ಒಪ್ಪಿಕೊಂಡಿದ್ದಾರೆ. ವೈಯಕ್ತಿಯ ವಿಚಾರಣೆಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : – ಮ್ಯಾಂಚೆ ಸ್ಟರ್ ಯುನೈಟೆಡ್ ತೊರೆದ ಕ್ರಿಸ್ಟಿಯಾನೊ ರೊನಾಲ್ಡೊ