ಬೆಂಗಳೂರು : ಕಾಶಿಯಾತ್ರೆಗೆ ನೀಡಲಾಗುತ್ತಿರುವ ಸಬ್ಸಿಡಿ ದರವನ್ನು 5 ಸಾವಿರ ರೂ.ಗಳಿಂದ 7,500 ರೂ.ಗಳಿಗೆ ಹೆಚ್ಚಿಸಿ ಮುಂದಿನ ದಿನಗಳಲ್ಲಿ ರಾಜ್ಯದ ಸಾಮಾನ್ಯ ಭಕ್ತರಿಗೂ ಯಾತ್ರೆಗೆ ತೆರಳಲು ಅವಕಾಶ ನೀಡಲಾಗುವುದು ಅಂತ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಶನಿವಾರ ರಾಜ್ಯ ಸರಕಾರದಿಂದ ರಿಯಾಯಿತಿ ದರದ ‘ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ’ ಯೋಜನೆಯಡಿ ಬೆಂಗಳೂರಿನಿಂದ 450 ಪ್ರಯಾಣಿಕರನ್ನು ಹೊತ್ತ ವಿಶೇಷ ರೈಲು ನಗರದ ಯಶವಂತಪುರ ರೈಲ್ವೆ ನಿಲ್ದಾಣದಿಂದ ಶನಿವಾರ ತೆರಳಿತು. ಈ ರೈಲಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವರು, “ಕಾಶಿಯಾತ್ರೆಯ ಸಹಾಯಧನ ಹೆಚ್ಚಿಸುವ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
ಒಟ್ಟು ಎಂಟು ದಿನಗಳ ಯಾತ್ರೆಯಲ್ಲಿ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್ ರಾಜ್ ಕ್ಷೇತ್ರಗಳಿಗೆ ತೆರಳಲು ರಾಜ್ಯ ಸರಕಾರವು ಐಆರ್‌ಸಿಟಿಸಿ ಮತ್ತು ಭಾರತೀಯ ರೈಲ್ವೆ ಇಲಾಖೆ ಸಹಯೋಗದೊಂದಿಗೆ ವಿಶೇಷ ರೈಲಿನ ಮೂಲಕ 2022-23ನೇ ಸಾಲಿನಿಂದ ಈ ಯೋಜನೆ ಕೈಗೊಂಡಿದೆ. ಈ ವಿಶೇಷ ರೈಲಿನಲ್ಲಿಅಡುಗೆ ಮನೆ, ವೈದ್ಯರ ತಂಡ ಇರಲಿದ್ದು ಪ್ರತಿ ಬೋಗಿಯಲ್ಲಿಸಿಸಿ ಕ್ಯಾಮರಾಗಳ ವ್ಯವಸ್ಥೆ ಇದೆ. 100 ಮಂದಿ ರೈಲ್ವೆ ಸಿಬ್ಬಂದಿಗಳು ಇರುತ್ತಾರೆ. ಇವರಿಗಾಗಿಯೇ ಪ್ರತ್ಯೇಕ ಬೋಗಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.