ಕೋಲಾರ : ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವಾಹನವನ್ನು ಯಾವುದೇ ಸಿಗ್ನಲ್ ನೀಡದೆ ಏಕಾಏಕಿ ನಿಲ್ಲಿಸಿದ ಹಿನ್ನಲೆ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಲ್ಲಿ ನಂಗಲಿ ಗ್ರಾಮದ ಯುವಕ ಗಿರೀಶ್ ಗೆ ಅಪಘಾತದಿಂದ ಕಾಲು ಮುರಿದಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ನಂಗಲಿ ಆರ್.ಟಿ.ಓ ಚೆಕ್ ಪೋಸ್ಟ್ ಬಳಿ ನಡೆದಿದೆ.
ಆರ್.ಟಿ.ಓ ಚೆಕ್ ಪೋಸ್ಟ್ ಬಳಿ ಲಾರಿ ಸಿಬ್ಬಂದಿ ನಿರ್ಲ್ಯಕ್ಷದಿಂದ ಅಪಘಾತ ಸಂಬವಿಸಿದೆ. ಅಂತರಾಜ್ಯ ವಾಹನಗಳ ಬಳಿ ಆರ್.ಟಿ.ಓ ಚೆಕ್ ಪೋಸ್ಟ್ ನಲ್ಲಿ ವಸೂಲಿ ಆರೋಪಿಸಲಾಗಿದ್ದು, ಆರ್.ಟಿ.ಓ ಅಧಿಕಾರಿಗಳ ಕ್ರಮಕ್ಕೆ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ಪ್ರಶ್ನೆ ಮಾಡಲು ಹೋದ ವೇಳೆ ಹಗಲಲ್ಲೇ ಸಿಬ್ಬಂದಿ ಕುಡಿಯಲು ಕುಳಿತಿದ್ದನು, ಇದನ್ನು ಜನರನ್ನು ಕೂಡಲೇ ಎಣ್ಣೆ ಬಾಟಲ್ ಸಮೇತ ಓಡಿ ಹೋದನು ಎನ್ನಲಾಗಿದೆ. ಚೆಕ್ ಪೋಸ್ಟ್ ಸಿಬ್ಬಂದಿ ಮೇಲೆ ಕ್ರಮಕ್ಕೆ ಸ್ಥಳೀಯರ ಆಗ್ರಹಿಸಿದ್ದು, ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ದಾಖಲಾಗಿದೆ.