ಬೆಂಗಳೂರು : ಈಗಾಗಲೇ ಬೆಲೆ ಏರಿಕೆಯಿಂದ ಗ್ರಾಹಕರ ತಲೆ ಬಿಸಿ ಆಗೋಗಿದೆ. ಮಾರ್ಕೆಟ್ ಗೆ ಹೋದ್ರೆ ಶಾಕ್, ದಿನಸಿ ಅಂಗಡಿಗೆ ಹೋದ್ರೂ ಶಾಕ್, ಹಾಲಿನ ಡೈರಿಗೆ ಹೋದ್ರೂ ಶಾಕ್. ಹೋಗ್ಲಿ ಕೊಂಚ ರಿಲ್ಯಾಕ್ಸ್ ಆಗೋಣ ಅಂತಾ ಬಾರ್ ಗೆ ಹೋಗೋಣ ಅನ್ನೋ ಗಂಡೈಕಳಿಗೂ ಶಾಕ್.
ಇದೀಗ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಲಾಗಿದ್ರೆ, ಈಗ ಮದ್ಯಪ್ರಿಯರಿಗೂ ಶಾಕ್ ಮೇಲೆ ಶಾಕ್ ಸಿಗ್ತಾಯಿದೆ.
ಸರ್ಕಾರದ ಹೆಸ್ರಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರು ಮದ್ಯಪ್ರಿಯರಿಂದ ಮನಬಂದಂತೆ ಹಣ ಪೀಕ್ತಿದ್ದಾರೆ. ಹೆಚ್ಚಳವಾದ ಶೇ. 20% ಅಬಕಾರಿ ಶುಲ್ಕಕ್ಕೆ, ಹೆಚ್ಚುವರಿ 40-45 % ಹಣ ಪಡೆಯುತ್ತಿದ್ದಾರೆ. ಪ್ರತಿ ಮದ್ಯದ ದರಕ್ಕಿಂತ 60-70 ರೂ. ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ. ಹೀಗಾಗಿ ಮಧ್ಯೆ ಪ್ರಿಯರಿಂದ ಹಣ ಪಿಕುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಬಾರ್ ಗಳ ವಿರುದ್ಧ ಅಬಕಾರಿ ಇಲಾಖೆಗೆ ಸಾಲು ಸಾಲು ದೂರು ಬಂದಿವೆ. ಇನ್ನು ಹಣ ವಸೂಲಿ ಮಾಡುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳ ಮೇಲೆ ದಾಳಿ ಮಾಡಲು ತಂಡ ರಚನೆಯನ್ನು ಮಾಡಲಾಗಿದೆ.
ಅಬಕಾರಿ ಇಲಾಖೆ ಅಧಿಕಾರಿಗಳು ಮಾರುವೇಷದಲ್ಲಿ ಬಂದು ಹೆಚ್ಚುವರಿ ಹಣ ಪಡೆಯುವವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯೋಕೆ ಪ್ಲಾನ್ ಮಾಡ್ತಿದ್ದಾರೆ. ಮಾರುವೇಷದಲ್ಲಿ ಬಂದ್ರೆ ರೆಡ್ ಹ್ಯಾಂಡಾಗಿ ಸಿಕ್ಕಾಕೊಳ್ಳುವುದು ಪಕ್ಕಾ. ಒಂದು ವೇಳೆ ತನಿಖೆ ವೇಳೆ ಸಿಕ್ಕರೆ ನಿಮ್ಮ ಬಾರ್ ಲೈಸನ್ಸ್ ಕ್ಯಾನ್ಸಲ್ ಮಾಡೋದಾಗಿ ಅಬಕಾರಿ ಇಲಾಖೆ ಅಪರ ಆಯುಕ್ತ ನಾಗರಾಜಪ್ಪ ಮಾಹಿತಿ ನೀಡಿದ್ದಾರೆ.
ವರದಿ – ಹರ್ಷಿತಾ ಪಾಟೀಲ