ಬೆಂಗಳೂರು : ರಾಜಧಾನಿಯಲ್ಲಿ ನೀವು ಜಾಲಿ ರೈಡ್ ಮಾಡಬೇಕು ಅಂತ ಅಂದುಕೊಂಡಿದ್ರೆ, ಅದು ಇನ್ಮೇಲೆ ಸಾಧ್ಯವಿಲ್ಲ. ಯಾಕಂದ್ರೆ ಇದಕ್ಕೆಲ್ಲ ಜಲಮಂಡಳಿ ಬ್ರೇಕ್ ಹಾಕುತ್ತಿದೆ. ಸ್ವಲ್ಪ ಯಾಮಾರಿದ್ರೂ ಪಲ್ಟಿ ಹೊಡೆಯೋದು ಫಿಕ್ಸ್. BWSSBಯ ಅರ್ಧ೦ಬರ್ಧ ಕಾಮಗಾರಿಗೆ ಬೆಂಗಳೂರಿಗರು ಸುಸ್ತಾಗಿ ಹೋಗಿದ್ದಾರೆ.
ಇತ್ತೀಚಿಗೆ BWSSB ಕಳಪೆ ಕಾಮಗಾರಿ ರಾಜಧಾನಿಯಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ರಸ್ತೆಗಳನ್ನು ಅಗೆದು ಅವೈಜ್ಞಾನಿಕ ಕಾಮಗಾರಿಗೆ ಜಲಮಂಡಳಿ ಮುಂದಾಗಿದೆ. ಇದೆ ರೀತಿಯ ಕಾಮಗಾರಿಯು ಎಸ್ ಪಿ ರಸ್ತೆಯ ಬಳಿ ಮಾಡಲಾಗಿದ್ದು, ಇದರಿಂದಾಗಿ ಎಸ್ ಪಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕೂಡ ಹೆಚ್ಚಾಗಿದೆ. ಇನ್ನು SP ರೋಡ್ ಮಾರ್ಗವಾಗಿ ಕಾರ್ಪೋರೇಷನ್ ರಸ್ತೆ, ಮೈಸೂರು ಬ್ಯಾಂಕ್ ಗೆ ಹೋಗೋ ಸವಾರರು ಕೊಂಚ ಎಚ್ಚರವಹಿಸಬೇಕಿದೆ.
ಎಸ್ ಪಿ ರಸ್ತೆಯು ಕಳೆದ ಕೆಲವು ತಿಂಗಳುಗಳಿಂದ ಸಂಪೂರ್ಣ ಹದಗೆಟ್ಟಿದೆ. ಇದರ ಮಧ್ಯೆ ಜಲಮಂಡಳಿಯ ಈ ಅರ್ಧ೦ಬರ್ಧ ಕಾಮಗಾರಿಯಿಂದ ವಾಹನ ಸವಾರರು ನರಕ ಅನುಭವಿಸುತ್ತಿದ್ದಾರೆ. ಮಧ್ಯೆ ರಾತ್ರಿ ಚರಂಡಿಯನ್ನು ಅಗೆದು ಕಾಮಗಾರಿ ಮಾಡಿದ್ದಾರೆ. ಅಲ್ಲದೇ ಕಾಮಗಾರಿಯನ್ನು ಪೂರ್ಣಗೊಳಿಸದೇ ಬ್ಯಾರಿಕೇಡ್ ಹಾಕಿ ಹಾಗೆ ಬಿಡಲಾಗಿದೆ. ಅಷ್ಟಕ್ಕೇ ಸುಮ್ಮನಾಗದೇ ಕಾಮಗಾರಿ ವೇಳೆ ಅಗೆದ ಮಣ್ಣು ಕೂಡ ರಸ್ತೆಯ ಪಕ್ಕದಲ್ಲೇ ಬಿಟ್ಟು ಹೋಗಿದ್ದಾರೆ.
ಇನ್ನು ಈ ರಸ್ತೆಯಲ್ಲಿ ದೊಡ್ಡ ಲಾರಿ, ಹಾಲಿನ ಟ್ಯಾಂಕರ್ ಹಾಗೂ ಪರರಾಜ್ಯಕ್ಕೆ ತೆರಳುವ ಬಸ್ ಗಳು ಸೇರಿ ಇನ್ನಿತರ ವಾಹನಗಳು ಓಡಾಟ ನಡೆಸ್ತಾವೆ. ವಾಹನ ಸಾವರರು ಎಚ್ಚರ ತಪ್ಪಿದ್ರೆ ಬಲಿ ಹಾಕಲು ಕಾದು ಕುಳಿತಿದೆ. BWSSB ಕಾಮಗಾರಿಯಿಂದ ಅರ್ಧ ರಸ್ತೆ ಕ್ಲೋಸ್ ಆಗಿದೆ. ಜಲಮಂಡಳಿ ಈ ಕಾಮಗಾರಿಯಿಂದಾಗಿ ವಾಹನ ಸವಾರರು ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನು ದಿನನಿತ್ಯ ಸಾವಿರಾರು ವಾಹನಗಳು ಈ ಮಾರ್ಗ ಮಧ್ಯೆ ಓಡಾಟ ನಡೆಸುತ್ತವೆ. ಆದಷ್ಟು ಬೇಗನೆ ಜಲಮಂಡಳಿ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕಿದೆ.
ಹರ್ಷಿತಾ ಪಾಟೀಲ