ಧಾರವಾಡ: ರಾಜಕೀಯ ಉದ್ದೇಶಕ್ಕಾಗಿ ಜಾತಿ ಗಣತಿ ಕಾರ್ಯ ಕೈಗೊಳ್ಳುವುದು ಸರಿಯಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಈ ಹಿಂದೆ ಆರ್ಥಿಕವಾಗಿ ಹಿಂದುಳಿದ ಜನರಿಗಾಗಿ ಜಾತಿ ಗಣತಿ ಎಂದು ಹೇಳಿದ ಸರ್ಕಾರ ಈಗ ಜಾತಿ ಹಾಗೂ ಒಳಪಂಗಡಗಳ ಅಂಕಿ ಸಂಖ್ಯೆ ಎಂದು ಹೇಳುವುದು ಸರಿಯಲ್ಲ. ಇದು ಜಾತಿ ಗಣತಿಯೋ ಹಿಂದುಳಿದ ಜನರ ಗಣತಿಯೋ ಎಂಬುದರ ಕುರಿತು ಮೊದಲು ಸರ್ಕಾರ ಸ್ಪಷ್ಟವಾಗಿರಬೇಕು. ಎಲ್ಲ ಜಾತಿಗಳನ್ನು ಒಡೆದು ಆಳುವ ವಿಚಾರ ಸರಿಯಲ್ಲ, ಎಲ್ಲಾ ಜಾತಿಗಳಲ್ಲೂ ಬಡವರಿದ್ದಾರೆ ಆಗ ಕುರಿತು ಸ್ಪಷ್ಟತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಲ್ಲ ಜಾತಿಗಳ ಅಂಕಿ ಸಂಖ್ಯೆ ಅವಶ್ಯಕತೆ ಇದೆ. ಇಲ್ಲಿ ಲಿಂಗಾಯತ ಸಮುದಾಯದ ಒಳ ಪಂಗಡದ ಜಾತಿ ಆಧಾರಿತವಾಗಿ ದಾಖಲು ಮಾಡಲಾಗಿದೆ. ಲಿಂಗಾಯತ ಬದಲು ಹಿಂದೂ ಬಣಜಿಗ, ಹಿಂದೂ ಪಂಚಮಸಾಲಿ, ಹಿಂದೂ ಗಾಣಿಗ ಎಲ್ಲವನ್ನೂ ಒಡೆದು ಆಳುವುದು ಸರಿಯಲ್ಲ ಎಂದು ತಿಳಿಸಿದರು. ಅಖಂಡ ಲಿಂಗಾಯತ ಸಮುದಾಯಕ್ಕೆ ಅನ್ಯಾಯ ಆಗುವ ನಿಟ್ಟಿನಲ್ಲಿ ಜಾತಿ ಗಣತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.