ಬೆಂಗಳೂರು: ಬೆಳಕಿನ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ದೀಪಗಳ ಹಬ್ಬಕ್ಕೆ ಮಾರ್ಕೆಟ್ ಗೆ ವೇರಾಯಿಟಿ ದೀಪಗಳು ಎಂಟ್ರಿ ಕೊಟ್ಟಿದ್ದು, ಕಲರ್ ಕಲರ್ ವಿಭಿನ್ನ ದೀಪಗಳು ಮಹಿಳೆಯರ ಕಣ್ಮನ ಸೆಳೆಯುತ್ತಿವೆ. .
ಒಂದ್ಕಡೆ ವೇರಾಯಿಟಿ ವೇರಾಯಿಟಿ ಹಣತೆಗಳು. ಇನ್ನೊಂದ್ಕಡೆ ಕಣ್ಮನ ಸೆಳೆಯುತ್ತಿರುವ ಲೈಟಿಂಗ್ಸ್ ದೀಪಗಳು. ಈ ಕಡೆ ಕಣ್ಣು ಹಾಯಿಸಿದರೆ ಡೆಕೋರೆಟ್ ವಸ್ತುಗಳು. ಎಸ್ ಗ್ರಾಹಕರನ್ನು ಸೆಳೆಯುತ್ತಿರುವ ದೀಪಗಳು ಒಂದ್ಕಡೆಯಾದ್ರೆ, ಖರೀದಿಯಲ್ಲಿ ಬ್ಯುಸಿಯಾಗಿರುವ ಗ್ರಾಹಕರು ಈ ದೃಶ್ಯಗಳು ಕಂಡು ಬಂದಿದ್ದು ಸಿಲಿಕಾನ್ ಸಿಟಿಯಲ್ಲಿ. ಹೌದು ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದ್ದು, ಸಿಲಿಕಾನ್ ಸಿಟಿ ಮಂದಿ ಭರ್ಜರಿ ತಯಾರಿಗೆ ಮುಂದಾಗಿದ್ದಾರೆ.
ದೀಪಾವಳಿಯ ಪ್ರಮುಖ ಆಕರ್ಷಣೆಗಳಾಗಿರುವ ಹಣತೆ, ಫ್ಯಾನ್ಸಿ ಹಾಗೂ ಅಲಂಕಾರಿಕ ವಸ್ತುಗಳು ಮಲ್ಲೆಶ್ವರಂನಲ್ಲಿರುವ ವರ್ಣದಲ್ಲಿ ಕಾಣಸಿಗ್ತಿವೆ. ಪಂಚಮುಖೀ ದೀಪ, ಲಕ್ಷ್ಮೀ ದೇವಿ, ಗಣೇಶ ದೀಪ, ನವಿಲು ದೀಪ, ಮೀನಿನ ದೀಪ ಸೇರಿ ಹಲವು ವಿನ್ಯಾಸಗಳಿಂದ ಕೂಡಿರುವ ಮಣ್ಣಿನಿಂದ ಮಾಡಿದ ತಮಗಿಷ್ಟವಾದ ಹಣತೆ ಖರೀದಿಯಲ್ಲಿ ಸಿಟಿ ಜನ ಬ್ಯುಸಿಯಾಗಿದ್ರು. ಇವುಗಳ ಜತೆಗೆ 4, 5 ಹಾಗೂ 7 ಮುಖದ ದೀಪಗಳೂ ಅಟ್ರ್ಯಾಕ್ಟ್ ಆಗಿದ್ದವು. ಇನ್ನು ಎರಡು ದಿನಗಳಿಂದ ವ್ಯಾಪಾರ ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಈಗ ದೀಪಾವಳಿ ಹಬ್ಬದ ಕಳೆ ಹೆಚ್ಚುತ್ತಿದೆ.
ಇನ್ನು ಮಣ್ಣಿನಿಂದ ಮಾಡಿದ ಭಿನ್ನ ಭಿನ್ನ ಶೈಲಿಯ ಹಣತೆಗಳು ಮಾರುಕಟ್ಟೆ ಪ್ರವೇಶ ಮಾಡಿದ್ದು ಜನರನ್ನು ಆಕರ್ಷಿಸುತ್ತಿವೆ. ಇನ್ನು ಟೆರಕೋಟಾ, ಮೆಟಲ್, ಪಿಂಗಾಣಿ, ಗಾಜು, ಫೈಬರ್ ಗಳ ದೀಪಗಳಿದ್ದು, ಅದರಲ್ಲೂ ವಿಶೇಷವಾಗಿ ಹ್ಯಾಂಗಿಂಗ್ ಲ್ಯಾಂಪ್ಸ್, ಫ್ಲೋರ್ ಲ್ಯಾಂಪ್ಸ್, ಫ್ಲೈ ಲ್ಯಾಂಪ್ಸ್, ಕಮಲದ ದೀಪಗಳು, ಗೊಂಬೆ ದೀಪಗಳು ಸೇರಿದಂತೆ 300ಕ್ಕೂ ಹೆಚ್ಚು ವೆರಾಯಿಟಿ ದೀಪಗಳಿವೆ. ಅದರಲ್ಲೂ ವಿಶೇಷವಾಗಿ ಗಣೇಶನ ದೀಪಗಳು ಕಣ್ಮನ ಸೆಳೆಯುವಂತಿದ್ವು. ಇನ್ನು ದೀಪಾವಳಿಗಾಗಿ ಡೆಕೋರೆಟ್ ವಸ್ತುಗಳು ಕೂಡ ಗ್ರಾಹಕರನ್ನು ಸೆಳೆಯುತ್ತಿವೆ. ಇನ್ನು ಇವುಗಳ ಬೆಲೆ 20 ರೂಪಾಯಿಯಿಂದ 8 ಸಾವಿರದವರೆಗೆ ಸಿಗುತ್ತವೆ.
ದೇಶದೆಲ್ಲೆಡೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ಹಬ್ಬ ದೀಪಾವಳಿಗೆ ಇನ್ನೇನು ವಾರಾವಷ್ಟೇ ಬಾಕಿ ಇದ್ದು, ವರ್ಷದ ಅತ್ಯಂತ ನಿರೀಕ್ಷಿತ ಹಬ್ಬವಾಗಿದ್ದು ಇಡೀ ವರ್ಷ ಮಾಡಲು ಕಾಯುತ್ತಿರುವದ್ದರಿಂದ, ಈ ಬಾರಿಯ ಹಬ್ಬ ಕೊಂಚ ಡಿಫರೆಂಟ್ ಆಗಿರಲಿದೆ.
ವರದಿ: ಹರ್ಷಿತಾ ಪಾಟೀಲ