ಬೆಂಗಳೂರು: ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲೆಡೆ ನಡೆಯುತ್ತಿದೆ. ಕಿಯೋನಿಕ್ಸ್ ಎಂ.ಡಿ ಗುತ್ತಿಗೆದಾರರ ಬಳಿ ಸುಮಾರು ಶೇಖಡಾ 12 ರಷ್ಟು ಕಮೀಷನ್ ಕೇಳಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂ.ಜಿ .ಮಹೇಶ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಎಲ್ಲಾ ಮಾಧ್ಯಮದಲ್ಲಿ ಬಿತ್ತರವಾಗಿದೆ ರಾಜ್ಯಕ್ಕೆ ಗೊತ್ತಾಗಿದೆ.ಈ ಸರ್ಕಾರದ ಲೂಟಿ ಮಾಡಿರೋ ಕಡೆ ಗಮನ ಹರಿಸಲಾಗಿದೆ. ರಾಜ್ಯದಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಸಚಿವ ಪ್ರಿಯಾಂಕಾ ಖರ್ಗೆ ಈ ಎಲ್ಲದರ ಕೇಂದ್ರ ಬಿಂದು ಎಂದು ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯಲ್ಲಿ ನಡೆದ ಕೆಇಎ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆಪಿಎಸ್ ಐ ಅಕ್ರಮದ ಹಿಂದೆ ಈ ಆರ್ ಡಿ ಪಾಟೀಲ್ ಪಾತ್ರವಿತ್ತು. ಆರ್ ಡಿ ಪಾಟೀಲ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದಾನೆ.
ಕಳೆದ ವಿಧಾನಸಭಾ ಚುನಾವಣಾ ಅಭ್ಯರ್ಥಿ ಆಗಬೇಕಿದ್ದ ವ್ಯಕ್ತಿ. ಸರ್ಕಾರವೇ ಆತನನ್ನು ಪೋಷಿಸುತ್ತಿದೆ. ಇದೆಲ್ಲವೂ ಕೂಡ ತಲುಪಬೇಕಾದ್ದು ಸಚಿವ ಪ್ರಿಯಾಂಕ ಖರ್ಗೆಗೆ. ಅವರ ತಂದೆ ಏನೂ ಅಧ್ಯಕ್ಷರಾಗಿದ್ದಾರೆ ಅವರ ಶ್ಯಾಡೋ ರೀತಿ ನಡೆದುಕೊಳ್ಳುತ್ತಿದ್ದಾರೆ. ಘಟನೆ ನಡೆದು ಆರೇಳು ದಿನಗಳಾದ್ರು ಕೂಡ ಸರ್ಕಾರ ಕ್ರಮವಿಲ್ಲ. ಆರ್ ಡಿ ಪಾಟೀಲ್ ತಪ್ಪಿಸಿಕೊಳ್ಳೋಕೆ ಸರ್ಕಾರವೇ ಪ್ರಯತ್ನ ಸಹಕಾರ ನೀಡುತ್ತೆ ಎಂದರು.
ಇನ್ನು ಪರೀಕ್ಷೆಯಲ್ಲಿ ಕಾಲುಂಗರ, ತಾಳಿ ತೆಗೆಸಿದ ವಿಚಾರವಾಗಿ ಈ ಸರ್ಕಾರ ಹಿಜಾಬ್ ಗೆ ಅವಕಾಶ ನೀಡ್ತಾರೆ.ಕೋರ್ಟ್ ಆದೇಶವಿದ್ದರೂ ಪಿಯುಸಿ ಮಟ್ಟಕ್ಕೆ ಮಾತ್ರ ಅಂತಾರೆ.ನಮ್ಮ ದೇಶದ ಸನಾತನ ವಿಚಾರ ತಾಳಿ ತೆಗೆಯುವುದು ಎರಡೇ ಸಂದರ್ಭದಲ್ಲಿ. ಒಂದು ಪತಿ ವಿಧಿವಶರಾದಾಗ, ಮತ್ತೊಂದು ಎಂಆರ್ ಐ ಸ್ಕ್ಯಾನಿಂಗ್ ಮಾಡುವಾಗ. ಈ ಸರ್ಕಾರ ಹಿಂದುತ್ವ ವಿಚಾರಕ್ಕೆ ಮೌಲ್ಯ ಬೆಲೆ ಕೊಡುತ್ತಿಲ್ಲ. ಹಿಂದೂಗಳ ತಾಳಿ ತೆಗೆಸುವ ದುಸ್ಸಾಹಸಕ್ಕೆ ಕೈ ಹಾಕುತ್ತದೆ ಎಂದರೆ ನಾಚಿಕೆ ಆಗಬೇಕು.ಈ ರಾಜ್ಯದಲ್ಲಿ ಹಿಂದೂಗಳನ್ನ ಯಾವ ದುಸ್ಥಿತಿಗೆ ತಂದಿದ್ದಾರೆ ತಿಳಿದುಕೊಳ್ಳಿ ಎಂದು ಹೇಳಿದ್ದಾರೆ.