ಕಲಬುರಗಿ : ಕಲಬುರಗಿಯಲ್ಲಿ ಬೀದಿ ನಾಯಿಗಳ ಹಾವಳಿ ಮುಂದುವರೆದಿದ್ದು ಇದೀಗ 5 ವರ್ಷದ ಬಾಲಕನ ಮೇಲೆ ನಾಯಿಗಳು ಅಟ್ಯಾಕ್ ಮಾಡಿವೆ. ಬಿಸ್ಬಾ ನಗರದಲ್ಲಿ ಘಟನೆ ನಡೆದಿದ್ದು ರಶೀದ್ ಎಂಬಾತ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹಾಲು ತರುವಂತೆ ರಶೀದ್ ಅಶ್ಫಕ್ನನ್ನು ಪೋಷಕರು ಅಂಗಡಿಗೆ ಕಳುಹಿಸಿದ್ದರು. ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೀದಿನಾಯಿಗಳು ಏಕಾಏಕಿಯಾಗಿ ರಶೀದ್ ಮೇಲೆ ದಾಳಿ ನಡೆಸಿ ಗಾಯಗೊಳಿಸಿವೆ. ಕಳೆದ ವಾರ ಬಾಲಕಿಯ ಮೇಲೆ ಬೀದಿ ನಾಯಿಗಳ ದಾಳಿ ನಡೆದಿತ್ತು. ವಾರದಲ್ಲಿ ಎರಡು ಪ್ರಕರಣಗಳು ನಡೆದಿದ್ದರೂ ನಗರ ಪಾಲಿಕೆ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ಮಿಸ್ಬಾನಗರ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.