ಬೆಂಗಳೂರು: ಕಾಂಗ್ರೆಸ್ ಸರ್ಕಾರ ಚುನಾವಣೆ ವೇಳೆ ರಾಜ್ಯದ ಪಡಿತರ ಚೀಟಿದಾರರಿಗೆ ತಲಾ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಇದೀಗ ಅಕ್ಕಿ ಪೂರೈಸಲಾಗಾದೆ ಸರ್ಕಾರ ಹೆಣಗಾಡುವ ಪರಿಸ್ಥಿತಿಗೆ ಬಂದು ನಿಂತಿದೆ. ಹೀಗಾಗಿ ಪಡಿತರ ಅಂಗಡಿಗಳು ಮುಚ್ಚುವ ಸ್ಥಿತಿಗೆ ಬಂದು ತಲುಪಿವೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆ ವೇಳೆ ರಾಜ್ಯದ ಪಡಿತರ ಚೀಟಿದಾರರಿಗೆ ತಲಾ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿ ಇದೀಗ ಅಕ್ಕಿ ಪೂರೈಸಲಾಗದೆ ಪೇಚಿಗೆ ಸಿಲುಕಿದೆ. ಗ್ಯಾರಂಟಿ ನೀಡೋ ಭರದಲ್ಲಿ ರಾಜ್ಯ ಸರ್ಕಾರ ಘೋಷಿಸಿದ್ದ 10 ಕೆಜಿ ಅಕ್ಕಿ ಇಲ್ಲಿವರೆಗೆ ಬಂದಿಲ್ಲ. ಯಾವ ಪಡಿತರದಾರರಿಗೂ ಇದುವರೆಗೂ ಬಂದೆ ಇಲ್ಲಾ. ಹೀಗಾಗಿ ರಾಜ್ಯ ಸರ್ಕಾರ ಕೂಡ ಅಕ್ಕಿ ಖರೀದಿಗೆ ಮುಂದಾಗಿತ್ತು. ಆದ್ರೆ ಸರಿಯಾದ ಬೆಲೆಗೆ ಅಕ್ಕಿ ಸಿಗದ ಕಾರಣ ಪಡಿತರದಾರರ ಖಾತೆಗೆ ಡಿಬಿಟಿ ಮೂಲಕ ಹಣ ನಿಡೋಕೆ ಮುಂದಾಗಿತ್ತು. ಅದೇ ಕೆಲ ತಿಂಗಳುಗಳಿಂದ ಇತ್ತ ಅಕ್ಕಿಯು ಇಲ್ಲ ಇತ್ತ ಹಣವು ಇಲ್ಲದಂತಾಗಿ ಜನ ಪರದಾಡುವ ಸ್ಥಿತಿ ಎದುರಾಗಿದೆ.
ಇನ್ನೂ ಅಕ್ಕಿ ಬರದ ಕಾರಣ ವಿತರಕರು ಕೂಡ ಸಿಡಿದೆದ್ದಿದ್ದಾರೆ. ಕೇಂದ್ರದಿಂದ ಬರೋ ಐದು ಕೆಜಿ ಅಕ್ಕಿ ವಿತರಣೆಯಿಂದ ಮತ್ತು ಅದರಿಂದ ಬರೋ ಕಮಿಷನ್ ನಿಂದ ಪಡಿತರ ಅಂಗಡಿ ನಡೆಸೋದು ಕಷ್ಟಕರವಾಗಿದೆ ಅಂತಿರೋ ವಿತರಕರು. ಹೀಗಾಗಿ ರಾಜ್ಯಾದ್ಯಂತ ಈ ತಿಂಗಳ ಅಕ್ಕಿಯನ್ನು ಗೋದಾಮಿನಿಂದ ಬಿಡಿಸದೇ ಇರೋದಕ್ಕೆ ನಿರ್ಧರಿಸಿದ್ದಾರೆ. ಐದು ಕೆಜಿ ಅಕ್ಕಿ ಬದಲಾಗಿ ಸರ್ಕಾರ ಜನರ ಅಕೌಂಟ್‌ಗೆ ನೇರ ಹಣ ಹಾಕ್ತಿದೆ. ಹಣವಾದ್ರೂ ಸರಿಯಾಗಿ ತಲುಪ್ತಿದೆಯಾ ಅಂದ್ರೆ ಅದೂ ಸಹ ಸರಿಯಾಗಿ ಜನರ ಅಕೌಂಟ್ ಗೆ ಬಿಳ್ತಿಲ್ಲ. ಬಿದ್ರೂ ಅದನ್ನು ಜನರ ವೈಯಕ್ತಿಕ ಸಾಲಕ್ಕೆ ಬ್ಯಾಂಕ್ ನವರು ಮುಟ್ಟು ಗೋಲು ಹಾಕ್ತಿದ್ದಾರೆ. ಇದರಿಂದ ಜನರು ಪಡಿತರ ವಿತರಕರ ಬಳಿ ಬಂದ್ ಜಗಳವಾಡ್ತಿದ್ದಾರಂತೆ. ಅತ್ತ ವಿತರಕರಿಗೆ ಬರೋ ಕಮಿಷನ್ ಹಣ ಬರುತ್ತಿಲ್ಲ. ಇತ್ತ ಹಣವೂ ಪಡಿತರದಾರರ ಕೈಸೇರದೆ ಜನರು ಜಗಳ ಮಾಡುತ್ತಿದ್ದಾರೆ. ಈ ಎಲ್ಲ ತೊಂದರೆಗಳಿಂದ ಬೇಸತ್ತ ಪಡಿತರ ವಿತರಕರು ಪಡಿತರ ಅಂಗಡಿಗಳನ್ನು ಮುಚ್ಚಲು ನಿರ್ಧರಿಸಿದ್ದಾರೆ.
ಇನ್ನೂ ರಾಜ್ಯದಲ್ಲಿ ಒಟ್ಟು 4.30 ಕೋಟಿ ಪಡಿತರದಾರರು ಇದ್ದಾರೆ. ಪ್ರತಿ ಫಲಾನುವಿಗೆ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಯನ್ನು ವಿತರಿಸಬೇಕು. ಅಂದರೆ ಪ್ರತಿತಿಂಗಳು ಸರ್ಕಾರಕ್ಕೆ ತಿಂಗಳಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು. ಆದರೆ ರಾಜ್ಯ ಸರ್ಕಾರದ ಬಳಿ ಪೂರೈಕೆಗೆ ಬೇಕಾದಷ್ಟ ಅಕ್ಕಿ ಸ್ಟಾಕ್ ಇಲ್ಲ ಹೀಗಾಗಿ ಪಡಿತರ ಪಡಿತರ ವಿತರಕರು ಪ್ರತಿ ತಿಂಗಳು 10 ಕೆಜಿ ಅಕ್ಕಿ ಬರದೆ ಇದ್ದರೆ ಸಂದರ್ಭದಲ್ಲಿ ಬಂದು ಮಾಡೋದಾಗಿ ತಿಳಿಸಿದ್ದಾರೆ.
ವರದಿ: ಮಂಜುನಾಥ್, ನಿರೋಣಿ