ಬೆಂಗಳೂರು: ರಾಜ್ಯ ದಲ್ಲಿ ಮುಂಗಾರಿನ ಕೃಷಿ ಚಟುವಟಿಕೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಿಎಂ ಹೇಳಿದ್ದಾರೆ ಉಸ್ತುವಾರಿಗಳು ಜಿಲ್ಲಾ ಪ್ರವಾಸ ಮಾಡಿ ವರದಿ ಕೊಡಿ ಅಂತಾ. ಈಗಾಗಲೇ ನಾವು ಕೇಂದ್ರಕ್ಕೆ ಪರಿಹಾರ ಮನವಿ ಸಲ್ಲಿಸಿದ್ದೇವೆ ಅಂತಾ ಹೇಳಿದ್ರು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚಿನ ವರ್ಷದಲ್ಲಿ ಈ ರೀತಿಯ ಬರಗಾಲ ಛಾಯೆ ಖಂಡಿಲ್ಲಾ ಅಂತಾ ಸರ್ಕಾರವೇ ಹೇಳ್ತಾ ಇದೆ.ರೈತರು ಬಿತ್ತನೆ ಚಟುವಟಿಕೆ ಭಾಗಿ ಆಗಿದ್ರು.ಮುಂಗಾರು ಮಳೆ ಕೊರತೆಯಿಂದ ಸುಮಾರು 65 ಹೆಕ್ಟಾರ್ ಬೆಳೆ ನಷ್ಟ ಆಗಿದೆ.ಇದನ್ನ ಕೇಂದ್ರಕ್ಕೆ ವರದಿ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಈ ವರ್ಷದ ಮುಂಗಾರಿನ ಕೃಷಿ ಚಟುವಟಿಕೆಯಲ್ಲಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಿಲ್ಲಾ ಪ್ರವಾಸಗಳನ್ನ ಮಾಡಿ ಸರ್ಕಾರಕ್ಕೆ ವರದಿ ಕೊಡಲಾಗಿದೆ. ಪರಿಹಾರದ ಮನವಿ ಸಲ್ಲಿಸಿದ್ದೇವೆ ಅಂತ ಸಿಎಂ ಹೇಳಿದ್ದಾರೆ. ಮುಂಗಾರಿನ ಕೊರತೆಯಿಂದ 65 ಲಕ್ಷ ಎಕ್ಟೇರ್ ಭೂಮಿಯಲ್ಲಿ ಬೆಳೆ ನಷ್ಟವಾಗಿದೆ. ಈ ವರದಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ ಅಂತ ಸಿಎಂ ಕೂಡ ಹೇಳಿದ್ದಾರೆ. 216 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಇದೆ ಅಂತ ವರದಿ ಕೊಟ್ಟಿದ್ದಾರೆ ಎಂದರು.