ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಅರ್ಜಿ ಆರಂಭವಾದ ಒಂದು ವಾರದ ನಂತರ ಇಲ್ಲಿಯವರೆಗೆ ರಾಜ್ಯದಲ್ಲಿ 55.18 ರಷ್ಟು ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ರಾಜ್ಯದ ಸುಮಾರು 80 ಲಕ್ಷಕ್ಕಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ತಮ್ಮ ಖಾತೆಗೆ ಹಣ ಯಾವಾಗ ಬರುತ್ತದೆ ಎಂದು ಕಾದು ಕುಳಿತಿದ್ದಾರೆ.
ನಿನ್ನೆ ಗೃಹ ಲಕ್ಷ್ಮಿ ಯೋಜನೆಗೆ 3,87,083 ಮಹಿಳೆಯರಿಂದ ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟಾರೆ ಇದುವರೆಗೂ 80,90,234 ಮಹಿಳೆಯರಿಂದ ಅರ್ಜಿ ಸಲ್ಲಿಕೆಯಾಗಿದೆ. ಕರ್ನಾಟಕದಾದ್ಯಂತ 1.28 ಕೋಟಿ ಗುರಿಯನ್ನು ಹೊಂದಲಾಗಿದ್ದು, ಈಗ ಒಟ್ಟು 80 ಲಕ್ಷದಷ್ಟು ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿ ಕೇವಲ 22.26 ರಷ್ಟು ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದಾರೆ.
ಇನ್ನು ಭಾನುವಾರವೂ ಅರ್ಜಿ ನೋಂದಣಿ ಪ್ರಕ್ರಿಯೆ ಮುಂದುವರೆದಿದೆ. ರಾಜಾಜಿನಗರದ ಬೆಂಗಳೂರು ಒನ್ ಸೆಂಟರ್ ಗೆ ಜನ ಬರ್ತಿದ್ದಾರೆ. ವಿಕೆಂಡ್ ಹಾಗು ಮೋಹರಂ ಸರ್ಕಾರಿ ರಜಾ ದಿನದ ಹಿನ್ನೆಲೆ ಫುಲ್ ರಶ್ ಆಗಿದೆ. ಭಾನುವಾರ ಅರ್ಜಿ ಸಲ್ಲಿಕೆಗೆ ಅವಕಾಶ ಇರಲ್ಲ ಎಂದು ಜನ ಗೊಂದಲದಲ್ಲಿದ್ದರು. ಇಂದು ಕೂಡ ಅರ್ಜಿ ಸಲ್ಲಿಕೆಗೆ ಅವಕಾಶ ಇರೋದರಿಂದ ಅರ್ಜಿ ನೋಂದಣಿಗೆ ಬರುತ್ತಿದ್ದಾರೆ.